ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸರಪಾಡಿ ಸಮೀಪದ ಮಿಯಾರ್ ಪಳಿಕೆ ಮತ್ತು ನೇಲ್ಯಪಳಿಕೆಯ ಕಾಲನಿ ನಿವಾಸಿಗಳೊಂದಿಗೆ ಮಂಗಳೂರಿನ ಸೇವಾ ಸಂಸ್ಥೆ ಎಂ. ಫ್ರೆಂಡ್ಸ್ ವತಿಯಿಂದ ಮೀಯಾರ್ ಪಳಿಕೆ ನೂರುಲ್ ಉಲೂಮ್ ಮದರಸ ವಠಾರದಲ್ಲಿ ಶನಿವಾರ ರಾತ್ರಿ ಇಫ್ತಾರ್ ಕೂಟ ಆಚರಣೆ ನಡೆಯಿತು.
ಇಫ್ತಾರ್ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಎಂ. ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತ ಮಜಲು ಅಧ್ಯಕ್ಷತೆ ವಹಿಸಿದ್ದರು. ತುಂಬೆ ಬಿ.ಎ. ಪದವಿಪೂರ್ವ ಕಾಲೇಜಿನ ಉಪ ನ್ಯಾಸಕ ಡಿ.ಬಿ. ಅಬ್ದುಲ್ ರಹಿಮಾನ್ ರಮ್ಜಾನ್ ಸಂದೇಶ ನೀಡಿದರು. ನೂರುಲ್ ಉಲೂಮ್ ಮಸೀದಿ ಇಮಾಮ್ ಅಶ್ರಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಎಂ. ಫ್ರೆಂಡ್ಸ್ ಟ್ರಸ್ಟಿ ಅಶ್ರಫ್ ಅಬ್ಟಾಸ್ ಮಂಜೇಶ್ವರ, ನೂರಲ್ ಉಲೂಮ್ ಮಸೀದಿ ಸ್ಥಾಪಕಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಅಧ್ಯಕ್ಷ ಇಸ್ಮಾಯಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮೀಯಾರ್ ಪಳಿಕೆ ಹಾಗೂ ನೇಲ್ಯಪಳಿಕೆ ಕಾಲನಿಯ ಬಡ ಕುಟುಂಬಿಕರಿಗೆ ಒಂದು ತಿಂಗಳ ರಮ್ಜಾನ್ ರೇಷನ್ ಕಿಟ್, ಜುಬ್ಬ ಮಕ್ಕನೆ, ವಸ್ತ್ರ ವಿತರಿಸಲಾಯಿತು.
ಇತ್ತೀಚೆಗೆ ನಿಧನ ಹೊಂದಿದ ಹಜಾಜ್ ಸಂಸ್ಥೆ ಸ್ಥಾಪಕ ಅಬ್ದುಲ್ ಖಾದರ್ ಹಾಜಿ ಸ್ಮರಣಾರ್ಥ ಅವರ ಕುಟುಂಬಿಕರು ಮಸೀದಿಯಲ್ಲಿ ಒಂದು ತಿಂಗಳ ಇಫ್ತಾರ್ ಪ್ರಾಯೋಜಕತ್ವ ನೀಡಿದರು.
ಎಂ. ಫ್ರೆಂಡ್ಸ್‌ನ ಡಾ| ಮುಬಶ್ಶಿರ್, ಸಫಾÌನ್ ವಿಟ್ಲ, ಆರಿಫ್ ಪಡುಬಿದ್ರಿ, ಕಲಂದರ್ ಪರ್ತಿಪಾಡಿ, ಇಶಾìದ್ ವೇಣೂರು, ಹನೀಫ್ ಕುದ್ದುಪದವು, ಝುಬೈರ್ ವಿಟ್ಲ, ಮುಸ್ತಫಾ ಇರುವೈಲ್, ಹಾರಿಸ್ ಕಾನತ್ತಡ್ಕ, ಆರಿಫ್ ಬೆಳ್ಳಾರೆ, ಅನ್ಸಾರ್ ಬೆಳ್ಳಾರೆ, ಡಿ.ಎಂ. ರಶೀದ್ ಉಕ್ಕುಡ, ಆಶಿಕ್ ಕುಕ್ಕಾಜೆ, ಅಬೂಬಕರ್ ಪುತ್ತ ಉಪ್ಪಿನಂಗಡಿ, ಮಹಮ್ಮದ್ ರಿಯಾಝ್ ಪುತ್ತೂರು, ರಫೀಕ್ ನೆಟ್ಲ, ರಫೀಕ್ ಕಲ್ಲಡ್ಕ, ಜಾಸಿಮ್, ಬಶೀರ್ ಮೀಯಾರ್ ಪಳಿಕೆ ಉಪಸ್ಥಿತರಿದ್ದರು.ಎಂ. ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ, ಟ್ರಸ್ಟಿ ಅಹ್ಮದ್ ಮುಸ್ತಫಾ ಗೋಳ್ತಮಜಲು ವಂದಿಸಿದರು.