Advertisement

ಮಂಗಳೂರು: ಕೆಎಂಸಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಕೇಂದ್ರ ಉದ್ಘಾಟಿಸಿದ ಶಿಲ್ಪಾ ಶೆಟ್ಟಿ

06:02 PM Sep 26, 2019 | Naveen |

ಮಂಗಳೂರು: ಪ್ರತಿ ಮಹಿಳೆಯರ ಜೀವನದಲ್ಲಿ ಗರ್ಭಾವಸ್ಥೆ ಒಂದು ಸುಂದರ ಪಯಣವಾಗಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ತಮ್ಮ ಜೀವನವನ್ನು ಸರಳವಾಗಿಸಬಹುದಾದ ಸಮರ್ಥ ವೈದ್ಯರ ಗಮನ, ಅತ್ಯಾಧುನಿಕ ಮೂಲ ಸೌಕರ್ಯ ಮತ್ತು ನವೀನ ತಂತ್ರಜ್ಞಾನದ ಅಗತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಇಂದು ಉದ್ಘಾಟನೆಗೊಂಡ ಕೆಎಂಸಿಯ ಈ ನೂತನ ಕೇಂದ್ರವು ಗಮನಾರ್ಹ ಪರಿಣಾಮವನ್ನು ಉಂಟು ಮಾಡಲಿದೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ ಹೇಳಿದರು.

Advertisement

ಅವರು ಗುರುವಾರದಂದು ನಗರದ ಟಿ.ಎಂ.ಪೈ.ಸಭಾಂಗಣದಲ್ಲಿ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕೆಎಂಸಿಯ ಈ ನೂತನ ಕೇಂದ್ರವು ಜಿಲ್ಲೆಯ ಮಹಿಳೆಯರಿಗೆ ಆರೋಗ್ಯ ಶುಶ್ರೂಷೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್  ಎಜುಕೇಷನ್ ನ ಉಪಕುಲಪತಿ ಡಾ. ಎಚ್.ಎಸ್.ಬಲ್ಲಾಳ್, ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥರಾದ ಡಾ.ಆನಂದ್ ವೇಣುಗೋಪಾಲ್, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಚರಣೆ ಅಧಿಕಾರಿ ಸಗೀರ್ ಸಿದ್ದಿಕಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next