Advertisement

8 ತಿಂಗಳ ಬಳಿಕ ಮಂಗಳೂರು-ಕಾಸರಗೋಡು ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭ

01:06 PM Nov 16, 2020 | keerthan |

ಮಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಸ್ಥಗಿತವಾಗಿದ್ದ ಮಂಗಳೂರು- ಕಾಸರಗೋಡು ನಡುವಣ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೋಮವಾರ ಬೆಳಗ್ಗಿನಿಂದ ಆರಂಭವಾಗಿದೆ.

Advertisement

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ಉಭಯ ಜಿಲ್ಲೆಗಳ ನಡುವಣ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಎರಡೂ ಜಿಲ್ಲೆಗಳ ಕೆಎಸ್ಆರ್ ಟಿಸಿ ನಿರ್ಧಾರದ ಕಾರಣದಿಂದಾಗಿ ಬಸ್ ಕಾರ್ಯಾಚರಣೆ ಆರಂಭಗೊಂಡಿದೆ.

ಇದನ್ನೂ ಓದಿ:ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ! ಉದ್ಯಮಿ, ರಾಜಕಾರಣಿಗಳು ಸೇರಿ 100ಕ್ಕೂ ಅಧಿಕ ಮಂದಿ ಬಂಧನ

ಮೊದಲ ಹಂತದಲ್ಲಿ ಮಂಗಳೂರಿನಿಂದ ಮತ್ತು ಕಾಸರಗೋಡು ಎಸ್ಆರ್ ಟಿಸಿ ಡಿಪೋದಿಂದ ತಲಾ‌ 10 ಬಸ್ ಗಳು ಕಾರ್ಯಾಚರಣೆ ಆರಂಭಿಸಿದೆ.‌ ಪ್ರಯಾಣಿಕರ  ಅಗತ್ಯತೆಗಳ ಅನುಗಣವಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next