Advertisement

ಮಂಗಳೂರು ಕಂಬಳದಲ್ಲಿ ಮುಂದುವರಿದ ‘ನಿಶಾಂತ್ ಶೆಟ್ಟಿ’ಪಾರುಪತ್ಯ: ಸತತ 6 ವರ್ಷವೂ ಮೆಡಲ್ ಸಾಧನೆ

08:30 AM Jan 24, 2023 | Team Udayavani |

ಮಂಗಳೂರು: ಕಂಬಳ ಕ್ಷೇತ್ರದ ತಾರಾ ಓಟಗಾರ ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಅವರು ಮತ್ತೆ ಮಂಗಳೂರು ಕಂಬಳದಲ್ಲಿ ತಮ್ಮ ಪಾರಪತ್ಯ ಮೆರೆದಿದ್ದಾರೆ. ಮಂಗಳೂರು ಕಂಬಳದಲ್ಲಿ ಸತತ ಆರನೇ ಬಾರಿ ಫೈನಲ್ ಪ್ರವೇಶ ಮಾಡಿದ ನಿಶಾಂತ್ ಶೆಟ್ಟಿ ಸಾಧನೆ ಮೆರೆದರು. ಈ ಬಾರಿ ನಿಶಾಂತ್ ಅವರು ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಅವರ ಕೋಣಗಳನ್ನು ಓಡಿಸಿ ಪ್ರಥಮ ಸ್ಥಾನ ಬಾಚಿಕೊಂಡರು.

Advertisement

ಇದನ್ನೂ ಓದಿ:ನ್ಯಾಯಾಲಯಕ್ಕೆ ಶರಣಾದ ಪಿಎಸ್ಐ ಪರೀಕ್ಷಾ ಹಗರಣ ಕಿಂಗ್ ಪಿನ್  ಆರ್.ಡಿ. ಪಾಟೀಲ

ಇದು ಆರನೇ ವರ್ಷದ ಮಂಗಳೂರು ರಾಮ – ಲಕ್ಷ್ಮಣ ಕಂಬಳ ಕೂಟವಾಗಿದ್ದು, ಆರು ವರ್ಷವೂ ನಿಶಾಂತ್ ಶೆಟ್ಟಿ ಅವರು ಪದಕ ಗೆದ್ದಿರುವುದು ಹೆಚ್ಚುಗಾರಿಕೆ. ಬಂಗ್ರಕೂಳೂರಿನಲ್ಲಿ ನಡೆಯುವ ಕೂಟದಲ್ಲಿ ಅವರು ಮೂರು ಪ್ರಥಮ, ಮೂರು ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.

ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 5 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 9 ಜೊತೆ,  ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ,  ನೇಗಿಲು ಹಿರಿಯ ವಿಭಾಗದಲ್ಲಿ 29 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 19 ಜೊತೆ,  ನೇಗಿಲು ಕಿರಿಯ ವಿಭಾಗದಲ್ಲಿ 78 ಜೊತೆ ಕೋಣಗಳು ಭಾಗವಹಿಸಿದ್ದವು.

Advertisement

ಮಂಗಳೂರು ಕಂಬಳ ಫಲಿತಾಂಶ 2023

ಕನೆಹಲಗೆ ( ನೀರು ನೋಡಿ ಬಹುಮಾನ)

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ

ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ “ಬಿ”

ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಎ”

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ

ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ “ಬಿ”

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ಹಗ್ಗ ಕಿರಿಯ

ಪ್ರಥಮ: ಬೇಳಿಂಜೆ ವಿಪಿನ್ ರೈ “ಎ”

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಮೂಡಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಹಿರಿಯ

ಪ್ರಥಮ: ಗುರುಪುರ ಕಾರಮೊಗರು ಗುತ್ತು ಯಶ್ ಜಗದೀಶ್ ಆಳ್ವ “ಬಿ”

ಓಡಿಸಿದವರು: ನಕ್ರೆ ಪವನ್ ಮಡಿವಾಳ್

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ “ಎ”

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ

ಪ್ರಥಮ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next