Advertisement
ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಮಂಗಳೂರು ಕಂಬಳ ಸಮಿತಿ ನೇತೃತ್ವದಲ್ಲಿ ಡಿ.3ರಂದು ಕೂಳೂರಿನ ಗೋಲ್ಡ್‌ಪಿಂ ಚ್ ಸಿಟಿಯಲ್ಲಿ ಕಂಬಳ ನಡೆಯಲಿದ್ದು, ಸುಮಾರು 100 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕಂಬಳವನ್ನು ಉಳಿಸುವ ಹಾಗೂ ಕಂಬಳ ದತ್ತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಂಗಳೂರು ಕಂಬಳ ಸಮಿತಿ ನಗರದ ಪ್ರದೇಶದಲ್ಲಿ ಕಂಬಳವನ್ನು ಆಯೋಜಿಸುತ್ತಿದ್ದು, ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ.
ಪ್ರಸ್ತುತ ಸರಪಾಡಿ ಜಾನ್ ಸಿರಿಲ್ ಡಿ’ ಸೋಜಾ ನೇತೃತ್ವದ 25 ಮಂದಿಯ ತಂಡ 10 ದಿನಗಳಿಂದ ಈ ಜೋಡುಕರೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ 152 ಮೀಟರ್ ಉದ್ದದ ಜೋಡುಕರೆ ಕಂಬಳ ನಿರ್ಮಿಸಲಾಗುತ್ತಿದ್ದು, ಇದಕ್ಕೆ ರಾಮ-ಲಕ್ಷ್ಮಣ ಜೋಡುಕರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ. 152 ಮೀಟರ್ ಉದ್ದದ ಕರೆ ನಿರ್ಮಿಸಲು 6ಸಾವಿರ ಕೆಂಪುಕಲ್ಲು ಬಳಕೆ ಮಾಡಲಾಗಿದೆ. ಇಲ್ಲಿ ಜೇಡಿ ಮಿಶ್ರಿತ ಮಣ್ಣಿರುವ ಕಾರಣ ತಳಭಾಗಕ್ಕೆ ಸುಮಾರು 80 ಲೋಡ್‌ನಷ್ಟು ಜಲ್ಲಿಹುಡಿ ಬಳಕೆ ಮಾಡಲಾಗಿದೆ. ಸುತ್ತ ಕಲ್ಲು ಕಟ್ಟಿಯಾದ ಬಳಿಕ ಜಲ್ಲಿ ಕ್ರಷರ್‌ಗಳನ್ನು ಡೋಜರ್ ಮೂಲಕ ಸಮತಟ್ಟು ಮಾಡಿ ಅದರ ಮೇಲೆ 60 ಲೋಡ್ ಮರಳು ಪಸರಿ, ಆ ಬಳಿಕ ನೀರು ಹಾಕಲಾಗುವುದು ಕರೆ ನಿರ್ಮಿಸುತ್ತಿರುವ ಜಾನ್ ಸಿರಿಲ್ ಡಿ’ ಸೋಜಾ.
Related Articles
ಸುಮಾರು 100 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆರು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಿಗೆ ಸೂಕ್ತ ಬಹುಮಾನಗಳನ್ನು ಘೋಷಿಸಲಾಗಿದೆ. ಕನೆಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಬಹು ಮಾನವಾಗಿ 2 ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ಹಗ್ಗ, ನೇಗಿಲು, ಹಿರಿಯ ವಿಭಾಗದಲ್ಲಿ 2 ಪವನ್, 1 ಪವನ್, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ 1 ಪವನ್, ಅರ್ಧ ಪವನ್, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್, ವಿಜೇತ ಕೋಣಗಳ ಸಹಾಯಕ ತಂಡಕ್ಕೆ 1 ಸಾ. ರೂ. ಬಹುಮಾನ ನೀಡಲಾಗುತ್ತದೆ.
Advertisement
ಇಂದು ಕುದಿಗುರುವಾರ ಕುದಿ (ಪ್ರಾಯೋಗಿಕ) ಕಂಬಳ ಓಡಿಸುವ ಕಾರ್ಯ ಕ್ರಮ ನಡೆಯಲಿದ್ದು, ಮುಂದಿನ ವಾರ ಮತ್ತೂಮ್ಮೆ ನಡೆ ಯಲಿದೆ. ತುಳು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ಪರಿಚಯಿಸುವ, ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ಡಿ.3ರಂದು ನಡೆಯುವ ಮಂಗಳೂರು ಕಂಬಳಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಹಿತ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕ್ಯಾಪ್ಯನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಕದ್ರಿ ಕಂಬಳ ಈಗಿಲ್ಲ
ಈ ಹಿಂದೆ ಕದ್ರಿ ದೇವರ ಕಂಬಳ ನಗರ ಪ್ರದೇಶದಲ್ಲಿ ನಡೆಯುತ್ತಿತ್ತು. ಕಂಬಳ ನಡೆಯುತ್ತಿದ್ದ ಭೂಮಿ ಬೇರೆಯವರ ಕೈ ಸೇರಿದ ಹಿನ್ನೆಲೆಯಲ್ಲಿ 2012ರಲ್ಲಿ ಕದ್ರಿ ಕಂಬಳ ಕೊನೆಯಾಗಿತ್ತು. ಪ್ರಜ್ಞಾ ಶೆಟ್ಟಿ