Advertisement
ರೈಲು ನಿಲ್ದಾಣ ಸ್ವತ್ಛವಾಗಿದ್ದರೂ ಅಗತ್ಯ ಆವಶ್ಯಕತೆಗಳನ್ನು ಒದಗಿಸುವಲ್ಲಿ ರೈಲ್ವೇ ಇಲಾಖೆ ಹಾಗೂ ಸ್ಥಳೀಯಾಡಳಿತ ವಿಫಲವಾಗಿದೆ ಎಂಬುದು ಪ್ರಯಾಣಿಕರ ಟೀಕೆ.
ಮಂಗಳೂರು- ಬಾಂಬೆಗೆ ತೆರಳುವ ಮತ್ಸÂಗಂಧ ಎಕ್ಸ್‌ಪ್ರೆಸ್, ಮಂಗಳೂರು-ಕಾರವಾರಕ್ಕೆ ತೆರಳುವ ಕಾರವಾರ ರೈಲು, ಮಂಗಳೂರು- ಗೋವಾಕ್ಕೆ ಹೋಗುವ ಇಂಟರ್‌ಸಿಟಿ ರೈಲಿಗಳಿಗೆ ಇಲ್ಲಿ ಸ್ಟಾಪ್ ಇಲ್ಲ. ಹೀಗಾಗಿ ಪ್ರಯಾಣಿಕರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳಬೇಕಿದೆ.
Related Articles
ರೈಲ್ವೇ ಜಂಕ್ಷನ್ ನಗರದಿಂದ ದೂರವಿರುವ ಕಾರಣ ನಿಲ್ದಾಣಕ್ಕೆ ನೇರ ಬಸ್ ಸಂಪರ್ಕವಿಲ್ಲ. ಬಜಾಲ್‌ಗೆ ತೆರಳುವ ಬಸ್ ಅಥವಾ ಬೇರೆ ಮಾರ್ಗ ವಾಗಿ ತೆರಳುವ ರಸ್ತೆಯಲ್ಲಿ ಹೋಗಿ ಬಳಿಕ ನಡೆದೇ ಹೋಗಬೇಕಾದ ಸ್ಥಿತಿಯುಂಟಾಗಿದೆ.
Advertisement
ಪ್ರಯಾಣಿಕರು ರೈಲು ಇಲಾಖೆ ನಿರ್ಮಿಸಿದ ರಸ್ತೆಗಿಂತ ನಿಲ್ದಾಣದ ಪಕ್ಕದಲ್ಲಿ ಹಾದುಹೋಗುವ ಖಾಸಗಿ ರಸ್ತೆಯನ್ನೇ ಅವಲಂಬಿಸಿದ್ದಾರೆ. ಕಾರಣ ಇಲಾಖೆಯ ರಸ್ತೆ 2 ಕಿ.ಮೀ ದೂರ ಹೆಚ್ಚಿದೆ. ಖಾಸಗಿ ರಸ್ತೆಯಲ್ಲಿ ಬಂದರೆ ಅಷ್ಟೊಂದು ದೂರವಿಲ್ಲ. ಸಮಯ, ಹಣ ಉಳಿತಾಯ ವಾಗುತ್ತದೆ ಎಂಬುದು ಪ್ರಯಾಣಿಕರ ಲೆಕ್ಕಾಚಾರ.
ರಸ್ತೆ ತುಂಬಾ ಕಿರಿದಾಗಿದ್ದು, ಒಂದು ವಾಹನ ಬಂದರೆ ಇನ್ನೊಂದು ವಾಹನಕ್ಕೆ ಸಂಚರಿಸಲು ಕಷ್ಟ. ಇದಕ್ಕಾಗಿ ಖಾಸಗಿಯವರ ಜಾಗ ಪಡೆದು ರಸ್ತೆಯನ್ನಾಗಿಸುವುದು ಉತ್ತಮ ಎಂಬುದು ಪ್ರಯಾಣಿಕರ ಸಲಹೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ರಿಕ್ಷಾ ಚಾಲಕರದ್ದೇ ಕಾರುಬಾರು ರೈಲು ನಿಲ್ದಾಣಕ್ಕೆ ನೇರ ಬಸ್ ಸಂಪರ್ಕ ಇಲ್ಲದ ಕಾರಣ, ರಿಕ್ಷಾ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಾರೆ ಎಂಬ ಆರೋಪ ಪ್ರಯಾಣಿಕರದ್ದು. ನಿಲ್ದಾಣದಲ್ಲಿ ಪ್ರಿಪೇಯ್ಡ ಆಟೋ ಸೌಲಭ್ಯವಿಲ್ಲ. ಪ್ರಿ ಪೇಯ್ಡ ಆಟೋ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಲಾಗುವುದು ಎಂಬುದು ಪೊಲೀಸರು ನೀಡುವ ಮಾಹಿತಿ. ವಿಶ್ರಾಂತಿ ಕೊಠಡಿ ಇಲ್ಲ
ರೈಲು ನಿಲ್ದಾಣಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲ. ಹಾಗಾಗಿ ಅದೇ ಕೊಠಡಿಯಲ್ಲಿ ಪುರುಷರೂ ಮಹಿಳೆಯರೂ ತಂಗಬೇಕಿದೆ. - ಪ್ರಜ್ಞಾ ಶೆಟ್ಟಿ