Advertisement
ರಾಜ್ಯದ ಐದು ವಿಮಾನ ನಿಲ್ದಾಣಗಳ ಹೆಸರು ಮರು ನಾಮಕರಣಕ್ಕೆ ತಿಂಗಳ ಹಿಂದೆ ರಾಜ್ಯ ಸರಕಾರ ಪ್ರಸ್ತಾವ ಮಾಡಿತ್ತು. ಅದರಂತೆ ಬೆಳಗಾವಿ, ಮಂಗಳೂರು, ಕಲಬುರ್ಗಿ, ಮೈಸೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಿ ಗೌರವ ಸಲ್ಲಿಸಲು ನಿರ್ಧರಿಸಿತ್ತು. ಜತೆಗೆ ಐತಿಹಾಸಿಕ ವ್ಯಕ್ತಿಗಳ ಹೆಸರು, ಸಾಧನೆ ಇನ್ನಿತರ ಸಮಗ್ರ ಮಾಹಿತಿ ಸಲ್ಲಿಸುವಂತೆ ಜಿಲ್ಲಾಡಳಿತಗಳಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸೂಚನೆ ನೀಡಿತ್ತು.
ವಿಮಾನ ನಿಲ್ದಾಣಕ್ಕೆ ಯಾವುದೇ ಹೆಸರು ಅಂತಿಮಗೊಳಿಸುವ ಮುನ್ನ ಆಸಕ್ತ ಪ್ರಾಯೋಜಕರು, ಸಂಘಟನೆಯ ಪ್ರಮುಖರ ಜತೆ ಜಿಲ್ಲಾಡಳಿತ ಸಭೆ ನಡೆ ಸಬೇಕು. ಸಭೆಯಲ್ಲಿ ಪ್ರಮುಖರು ಅಂತಿಮ ಹೆಸರನ್ನು ಜಿಲ್ಲಾಡಳಿತಕ್ಕೆ ನೀಡ ಬೇಕು. ಅನಂತರ ಜಿಲ್ಲಾಡಳಿತವು ಪ್ರಸ್ತಾ ವದಲ್ಲಿ ರುವ ಹೆಸರನ್ನು ಸಂಬಂಧಪಟ್ಟ ಇಲಾಖೆಗೆ ನೀಡಬೇಕು. ಆದರೆ ದ.ಕ. ಜಿಲ್ಲಾಡಳಿತವು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನೂ, ಯಾವುದೇ ರೀತಿಯ ಸಭೆ ನಡೆಸಲಿಲ್ಲ. ಹೆಸರು ಕೂಡ ಅಂತಿಮಗೊಳಿಸಲಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿಯ ವೀರ ಪುರುಷರು ಅಥವಾ ವೀರ ಮಹಿಳೆಯರ ಹೆಸರು ನಾಮಕರಣ ಮಾಡಬೇಕೆಂಬ ಕೂಗು ಈ ಹಿಂದಿನಿಂದಲೂ ಇದೆ. ಬೆಂಗಳೂ ರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅನಂತರದ ರಾಜ್ಯದಲ್ಲಿ 2ನೇ ಅತಿದೊಡ್ಡ ವಿಮಾನ ನಿಲ್ದಾಣ ಮಂಗಳೂರಿನದ್ದಾಗಿದೆ. ಆದರೆ ಬೆಂಗಳೂರಿನಂತೆಯೇ ಮಂಗ ಳೂರು ವಿಮಾನ ನಿಲ್ದಾಣಕ್ಕೂ ಇಲ್ಲಿನ ಯುಗ ಪುರುಷರ ಹೆಸರು ಇಡಬೇಕೆಂಬ ಒತ್ತಾಯ ಇತ್ತು. ಈಗ ಅದಕ್ಕೆ ಮರುಜೀವ ಬಂದಿದೆ.
Related Articles
Advertisement
ಇನ್ನೊಂದೆಡೆ, ಮಂಗಳೂರು ವಿಮಾನ ನಿಲ್ದಾಣಕ್ಕೆ “ವೀರ ರಾಣಿ ಅಬ್ಬಕ್ಕ’ನವರ ಹೆಸರಿ ಡುವಂತೆ ಕೇಂದ್ರ ಸರಕಾರಕ್ಕೆ ಶಿಫಾ ರಸು ಮಾಡುವುದಾಗಿ ಸಚಿವ ಯು.ಟಿ. ಖಾದರ್ ಅವರು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಣಿ ಅಬ್ಬಕ್ಕ ಉತ್ಸವದಲ್ಲಿ ಭರವಸೆ ನೀಡಿದ್ದರು. ಈ ನಡುವೆ, ಮಂಗಳೂರು ವಿಮಾನ ನಿಲ್ದಾಣವನ್ನು ಆರಂಭಿಸಿದ ಕೀರ್ತಿ ಯು.ಎಸ್. ಶ್ರೀನಿವಾಸ ಮಲ್ಯ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ವಿಮಾನ ನಿಲ್ದಾ ಣಕ್ಕೆ ಮಲ್ಯರ ಹೆಸರನ್ನು ಇಡಬೇಕೆಂಬ ದೊಡ್ಡ ಮಟ್ಟದ ಬೇಡಿಕೆ ಕೂಡ ಇದೆ.
ಇದರ ಹೊರತಾಗಿಯೂ ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ದಲಿತ ಕುಟುಂಬಗಳು ಜಮೀನು ನೀಡಿರುವ ಹಿನ್ನೆಲೆಯಲ್ಲಿ ಡಾ| ಅಂಬೇಡ್ಕರ್ ಅವರ ಹೆಸರು ಇಡಬೇಕೆಂದು ದಲಿತ ಸಂಘಟನೆಗಳು ಬೇಡಿಕೆಯಿಟ್ಟಿವೆ. ಈ ಸಂಬಂಧ ಮಳವೂರು ಗ್ರಾಮಸಭೆಯಲ್ಲಿ ಒಂದು ವರ್ಷದ ಹಿಂದೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಪ್ರಧಾನಿಗೆ ಈಗಾಗಲೇ ಪತ್ರಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ’ರ ಹೆಸರು ನಾಮಕರಣ ಮಾಡಬೇಕು ಎಂದು ಬೆಳ್ತಂಗಡಿ ತಾಲೂಕಿನ ಶಿಬಾಜೆಯ ವಿಜೆತ್ ಅವರು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ 12 ಪುಟಗಳ ಪತ್ರವನ್ನು ಕಳುಹಿಸುವ ಮೂಲಕ ಮನವಿ ಈಗಾಗಲೇ ಮಾಡಿದ್ದಾರೆ. ಹೆಸರು ಅಂತಿಮಗೊಂಡಿಲ್ಲ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವ ಸಂಬಂಧ ಈವರೆಗೆ ಯಾವುದೇ ಹೆಸರು ಕೂಡ ಅಂತಿಮಗೊಂಡಿಲ್ಲ. ಸದ್ಯದಲ್ಲಿಯೇ ಸಂಘಟನೆ, ಪ್ರಮುಖರ ಸಭೆ ಕರೆಯುತ್ತೇನೆ. ಬಳಿಕ ಹೆಸರು ಅಂತಿಮಗೊಳಿಸಿ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
- ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ