Advertisement
ಮುಂಬಯಿಯಲ್ಲದೆ, ದುಬಾೖ, ಮಸ್ಕತ್‌ಗಳಿಗೆ ಪ್ರಯಾಣಿಸುವವರಿಗೂ ತೀವ್ರ ತೊಂದರೆಯಾಗಿದೆ. ಕಳೆದ ವರ್ಷ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಟ್ ಏರ್‌ವೆàಸ್ ನ 13 ವಿಮಾನಗಳು ಅಬುಧಾಬಿ, ಮಸ್ಕತ್, ದುಬಾೖ, ಮುಂಬಯಿ, ಬೆಂಗಳೂರು, ಚೆನ್ನೈ ಮತ್ತು ಹೊಸದಿಲ್ಲಿ ಮುಂತಾದೆಡೆಗೆ ಹಾರಾಡುತ್ತಿದ್ದವು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿಜಗತ್ತಿನಾದ್ಯಂತ ತನ್ನ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿದೆ. ಬುಧವಾರ ಮಂಗಳೂರಿನಿಂದ ಮುಂಬಯಿಗೆ ತೆರಳುವ ಕೊನೆಯ ವಿಮಾನವನ್ನೂ ರದ್ದುಗೊಳಿಸಿತು.ದುಬಾೖ, ಅಬುಧಾಬಿಗೆ ಸಂಚರಿಸು ತ್ತಿದ್ದ ಜೆಟ್ ಏರ್‌ಲೈನ್ಸ್‌ನ 2 ವಿಮಾನ ಗಳ ಹಾರಾಟ ಡಿ. 4ರಂದೇ ರದ್ದಾಗಿತ್ತು. ಈ ಸೇವೆ ಮತ್ತೆ ಆರಂಭವಾಗಬಹುದು ಎಂಬ ನಿರೀಕ್ಷೆ ಇದ್ದಾಗಲೇ ಎಲ್ಲವೂ ಸ್ಥಗಿತಗೊಂಡಿರುವುದು ಪ್ರಯಾಣಿಕರಲ್ಲಿ ನಿರಾಶೆ ಉಂಟು ಮಾಡಿದೆ.
ಈ ಹಿಂದೆ ದಿನಕ್ಕೆ ಮಂಗಳೂರು ಕೇಂದ್ರಿತವಾಗಿ ದೇಶ-ವಿದೇಶಕ್ಕೆ ಕನಿಷ್ಠ 3 ಜೆಟ್ ವಿಮಾನಗಳ ಆಗಮನ-ನಿರ್ಗಮನವಾಗುತ್ತಿತ್ತು. ಅಂದರೆ ಒಂದು ದಿನಕ್ಕೆ ಸುಮಾರು 400 ಪ್ರಯಾಣಿಕರು ಮಂಗಳೂರು ಏರ್‌ಪೋರ್ಟ್‌ನಿಂದ ಪ್ರಯಾಣಿಸುತ್ತಿದ್ದರು. ತಿಂಗಳಿಗೆ ಸರಿಸುಮಾರು 12 ಸಾವಿರ ಮಂದಿ ಪ್ರಯಾಣಿಕರು ಈ ವಿಮಾನ ಸೇವೆಯನ್ನು ಅವಲಂಬಿಸಿದ್ದರು. ಅವರೆಲ್ಲ ಬೇರೆ ವಿಮಾನಗಳನ್ನು ಆಶ್ರಯಿಸಬೇಕಿದೆ. 13 ವಿಮಾನಗಳು ಕೆಲವೇ ತಿಂಗಳೊಳಗೆ ಸಂಚಾರ ಸ್ಥಗಿತಗೊಳಿಸುವ ಮೂಲಕ ವಿಮಾನಯಾನ ಸೇವೆಯಲ್ಲಿ ಬಹುದೊಡ್ಡ ವ್ಯತ್ಯಯ ಉಂಟಾಗಿದೆ. ಇದರಿಂದ ಪ್ರಯಾಣಿಕರು ಮಂಗಳೂರಿನ ಯಾನಿಗಳು ಬೇರೆ ನಗರಗಳನ್ನು ಆಶ್ರಯಿಸಬೇಕಾದ ಅಥವಾ ಇತರ ವಿಮಾನ ಯಾನ ಸಂಸ್ಥೆ ಗಳ ಮೊರೆ ಹೋಗಬೇಕಾದ ಒತ್ತಡ ಎದುರಿಸಬೇಕಿದೆ. ಸದ್ಯ ಕರಾವಳಿಗೆ ಈ ಏಟು ಸ್ವಲ್ಪ ಹೆಚ್ಚೇ ಪರಿಣಾಮ ಬೀರಿದೆ.
Related Articles
ವಿಮಾನವೇ ಇಲ್ಲ!
ಸದ್ಯ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸೇವೆ ಮಂಗಳೂರಿನಿಂದ ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ದುಬಾೖ, ದೋಹಾ, ಕತಾರ್, ಶಾರ್ಜಾ, ಬಹ್ರೈನ್, ಕುವೈಟ್, ಮಸ್ಕತ್‌ಗೆ ಇದೆ.
Advertisement
ಇಲ್ಲಿಯವರೆಗೆ ರಾಜಧಾನಿ ಹೊಸದಿಲ್ಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್‌ವೇಸ್ ವಿಮಾನ ಸಂಚರಿಸುತ್ತಿತ್ತು. ಹಲವು ದಿನಗಳಿಂದ ಆ ವಿಮಾನವೂ ಹಾರಾಟ ನಿಲ್ಲಿಸಿದೆ. ಈಗ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆಯೇ ಇಲ್ಲ. ದಿಲ್ಲಿಗೆ ಹೋಗಬೇಕಾದರೆ ಬೆಂಗಳೂರು ಅಥವಾ ಮುಂಬಯಿಗೆ ಹೋಗಿ ತೆರಳಬೇಕಿದೆ.
ಆಯ್ಕೆಯ ಕೊರತೆಮಂಗಳೂರಿನಿಂದ ಪ್ರಯಾಣಿಸುವವರಿಗೆ ಆಯ್ಕೆಯ ಕೊರತೆ ಎದುರಾಗಿದೆ. ಉಳಿದ ಕಂಪೆನಿಗಳ ಸೇವೆ ಲಭ್ಯವಿದ್ದರೂ ಒತ್ತಡ ಹೆಚ್ಚಲಿದೆ. ಸಾಮಾನ್ಯವಾಗಿ ವಿಮಾನ ಪ್ರಯಾಣಕ್ಕೆ ಕನಿಷ್ಠ 5-10 ದಿನಗಳ ಅಂತರದಲ್ಲಿಯೂ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುವವರಿದ್ದರು. ಈಗ ಲಭ್ಯತೆ ಕೊರತೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಗಡವಾಗಿಯೇ ಯೋಜಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತುರ್ತು ಕಾಲದಲ್ಲಿ ವಿಮಾನ ಪ್ರಯಾಣಕ್ಕೆ ಟಿಕೆಟ್‌ಪಡೆಯಲು ದುಬಾರಿ ಹಣ ತೆರಬೇಕಾಗಲೂಬಹುದು. ಒಂದು ವೇಳೆ ಬೇರೆ ಕಂಪೆನಿಗಳ ಹೆಚ್ಚುವರಿ ಸೇವೆ ಆರಂಭವಾದರೆ ಈ ಸಮಸ್ಯೆಯ ತೀವ್ರತೆ ಕಡಿಮೆ ಯಾಗುವ ಸಂಭವವಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ. ಬೇರೆ ಕಂಪೆನಿಯ ಸೇವೆ ನಿರೀಕ್ಷೆ
ಮಂಗಳೂರಿನಿಂದ ಹಾರಾಟ ನಡೆಸುತ್ತಿದ್ದ ಜೆಟ್ ಏರ್‌ವೆàಸ್ ತನ್ನ ಎಲ್ಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಸ್ಥಗಿತಗೊಂಡಿರುವ ಯಾನದ ಸಮಯದಲ್ಲಿ ಇನ್ಯಾವುದೇ ವೈಮಾನಿಕ ಕಂಪೆನಿಗಳಿಂದ ಹೊಸ ಸೇವೆ ದೊರಕಿಸುವ ನೆಲೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.
– ವಿ.ವಿ. ರಾವ್, ನಿರ್ದೇಶಕರು,
ಮಂಗಳೂರು ಏರ್‌ಪೋರ್ಟ್ ಪ್ರಾಧಿಕಾರ – ದಿನೇಶ್ ಇರಾ