Advertisement
ಈ ಸಂದರ್ಭ ಮಾತನಾಡಿದ ಪೊಲೀಸ್ ಆಯುಕ್ತರು, ನಗರದಲ್ಲಿ ಇದುವರೆಗೆ 2,133 ಮೊಬೈಲ್‌ಪೋನ್‌ಗಳ ಪತ್ತೆಗೆ ಸಾರ್ವಜನಿಕರಿಂದ ಸಿಇಐಆರ್ ಪೋರ್ಟಲ್ ಮುಖಾಂತರ ಕೋರಿಕೆಗಳು ಬಂದಿವೆ. ಇದರಲ್ಲಿ 2,391 ಐಎಂಇಐಗಳನ್ನು ಬ್ಲಾಕ್ ಮಾಡಲಾಗಿದೆ. 524 ಮೊಬೈಲ್ ಪೋನ್‌ಗಳು ಪತ್ತೆಯಾಗಿವೆ. ಈಗಾಗಲೇ 240 ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ 147 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇದೀಗ ಮತ್ತೆ 93 ಮೊಬೈಲ್‌ಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.
ಸೈಬರ್ ವಂಚಕರು ಬಳಸುವ ಮೊಬೈಲ್ ಪೋನ್‌ಗಳ ಐಎಂಇಐನ್ನು ಕೂಡ ಸಿಇಐಆರ್ ಮೂಲಕ ಬ್ಲಾಕ್ ಮಾಡಲಾಗುತ್ತಿದೆ. ಇದರಿಂದಾಗಿ ಸೈಬರ್ ವಂಚಕರು ಅದೇ ಸಂಖ್ಯೆಯನ್ನು ಮತ್ತೆ ಬಳಕೆ ಮಾಡುವುದನ್ನು ತಡೆಯಬಹುದಾಗಿದೆ.
Related Articles
“ನಾನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮೊಬೈಲ್ ಕಳವಾಗಿತ್ತು. ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಅನಂತರ ಸಿಇಐಆರ್‌ನಲ್ಲಿ ಮೂಲಕ ಮಾಹಿತಿ
ನಮೂದಿಸಲಾಗಿತ್ತು. 14,000 ರೂ. ಮೌಲ್ಯದ ಮೊಬೈಲ್ ವಾಪಸ್ ಸಿಕ್ಕಿದೆ’ ಎಂದು ಜೆಪ್ಪುವಿನ ಬಿಂದು ಅವರು ಸಂತೋಷ ಹಂಚಿಕೊಂಡರು. “ನಾನು ಮಣ್ಣಗುಡ್ಡೆಯಲ್ಲಿ ರೇಷನ್ ನಡೆಸಿಕೊಂಡಿದ್ದು ಮೊಬೈಲ್ ಕಳವಾಗಿದ್ದರಿಂದ ತುಂಬಾ ತೊಂದರೆಯಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಳವಾಗಿದ್ದ ಮೊಬೈಲ್ ಈಗ ಸಿಕ್ಕಿದೆ’ ಎಂದು ಸುಕುಮಾರ ಶೆಟ್ಟಿ ಹೇಳಿದರು.
Advertisement