Advertisement
ಜು. 8ರ ಸಂಜೆ 5ಕ್ಕೆ ವಿಮಾನ ದುಬಾೖಯಿಂದ ಹೊರಟು ರಾತ್ರಿ 9.30ಕ್ಕೆ ಮಂಗಳೂರಿಗೆ ಆಗಮಿಸಿದೆ, ಲ್ಯಾಂಡ್ ಆಗುವುದಕ್ಕೆ ಮುಂದಾಗಿತ್ತು. ಭೂಸ್ಪರ್ಶ ಮಾಡುತ್ತದೆ ಎನ್ನುವಾಗಲೇ ಮತ್ತೆ ಪೈಲಟ್ ಮೇಲೇರಿಸಿದ್ದು ಕೊಯಮತ್ತೂರಿಗೆ ಹೋಗುವುದಾಗಿ, ಇಂಧನ ಭರ್ತಿ ಮಾಡುವುದಾಗಿ ತಿಳಿಸಲಾಯಿತು. ಬಳಿಕ ಕೊಚ್ಚಿಗೆ ಹೋಗುವುದಾಗಿ ತಿಳಿಸಲಾಯಿತು.
Related Articles
ಹವಾಮಾನದ ನೆಪವೊಡ್ಡಲಾಗಿದೆ. ಆದರೆ ಯಾವುದೋ ಬೇರೆ ತಾಂತ್ರಿಕ ಕಾರಣಗಳಿಂದ ಕೊಚ್ಚಿಯಲ್ಲಿ ಇಳಿಸಿದ್ದಾರೆ. ಅಲ್ಲೂ ಯಾವುದೇ ಸೌಲಭ್ಯ ಕೊಡಲಿಲ್ಲ, ರೂಂ ಒದಗಿಸಿಲ್ಲ, ಬದಲು ನಾವು ಏರ್‌ಪೋರ್ಟ್ ನಲ್ಲೇ ಕಾಯುವಂತಾಯಿತು, ನಮ್ಮ ಖರ್ಚಲ್ಲೇ ಊಟ, ತಿಂಡಿ ಮಾಡಿಕೊಳ್ಳುವ ಹಾಗೆ ಆಗಿದೆ, ಸ್ಪೈಸ್‌ಜೆಟ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕ ಅಬ್ದುಲ್ ರಹಿಮಾನ್ ಜೋಕಟ್ಟೆ ಉದಯವಾಣಿಗೆ ತಿಳಿಸಿದರು.
Advertisement
ಇಷ್ಟೇ ಅಲ್ಲ, ಕೊಚ್ಚಿಯಲ್ಲಿ ವಿಮಾನ ಇಳಿದಾಗ ಕೆಲವು ಕೇರಳದ ಪ್ರಯಾಣಿಕರು ಅಲ್ಲೇ ಇಳಿದು ಹೋಗಿದ್ದಾರೆ, ಅವರ ಲಗೇಜ್ ಜತೆಗೆ ಕೆಲವು ಮಂಗಳೂರಿನವರ ಲಗೇಜ್ ಕೂಡ ಹೋಗಿದೆ. ಇನ್ನು ಅವರು ಅದಕ್ಕಾಗಿ ಕಾಯಬೇಕಿದೆ.