Advertisement

ಆದಿತ್ಯರಾವ್ ತಿಂಗಳಾನುಗಟ್ಟಲೆ ಬಾಂಬ್ ತಯಾರಿಕೆಯ ಬಗ್ಗೆ ಅಧ್ಯಯನ ಮಾಡಿದ್ದ: ಡಾ. ಹರ್ಷ

09:57 AM Jan 24, 2020 | Naveen |

ಮಂಗಳೂರು: ಆದಿತ್ಯ ರಾವ್  ಸುಧಾರಿತ ಸ್ಪೋಟಕ ತಯಾರು ಮಾಡಲು ತಿಂಗಳಾನುಗಟ್ಟಲೆ ಅಧ್ಯಯನ ಮಾಡಿದ್ದು, ಆ ಬಳಿಕ  ಎಲ್ಲಾ ಮಾದರಿಯ ರಾಸಾಯನಿಕಗಳನ್ನು ತರಿಸಿದ್ದಾನೆ. ಇದಕ್ಕಾಗಿ ತನ್ನ ಇಂಜಿನಿಯರಿಂಗ್ ಕೌಶಲ್ಯವನ್ನು ಬಳಕೆ ಮಾಡಿಕೋಂಡಿದ್ದಾನೆಂದು  ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ತಿಳಿಸಿದ್ದಾರೆ.

Advertisement

ಮಂಗಳೂರು ಬಾಂಬರ್ ಆದಿತ್ಯ ರಾವ್ ಪ್ರಕರಣ ಕುರಿತು ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದ ಆಂತರಿಕ ಭದ್ರತೆಗೆ ಆತಂಕ ತಂದ ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆತನ ಜೊತೆ ಯಾರೂ ಇರಲಿಲ್ಲ,  ಒಬ್ಬನೇ ಕೃತ್ಯ ಎಸಗಿದ್ದಾನೆಂದು ಸದ್ಯಕ್ಕೆ ತನಿಖೆಯಲ್ಲಿ ತಿಳಿದುಬಂದಿದೆ. ಇಂಜಿನಿಯರಿಂಗ್ ಓದಿರುವುದರಿಂದ  ಒಬ್ಬನೇ ಕೆಲಸ ಮಾಡಿದ್ದು, ಇದಕ್ಕಾಗಿ ಜಸ್ಟ್ ಡಯಲ್, ಯುಟ್ಯೂಬ್ ಮೂಲಕ ಎಲ್ಲಾ ಮಾಹಿತಿ ಪಡೆದಿದ್ದಾನೆ ಎಂದು ಹೇಳಿದರು.

ಮಂಗಳೂರಿನ ಹೊಟೇಲ್ ನಲ್ಲಿ ಕೆಲಸಕ್ಕಿದ್ದ ವೇಳೆ ಆನ್ ಲೈನ್ ಮೂಲಕ ಸ್ಪೋಟಕ ತಯಾರಿಕೆಗೆ ಅಗತ್ಯವಾದ ಎಲ್ಲಾ ರಾಸಾಯನಿಕಗಳನ್ನು ತರಿಸುತ್ತಿದ್ದ. ವಾರದ ರಜೆಯ ಸಂದರ್ಭದಲ್ಲಿ ಬಾಂಬ್ ತಯಾರಿಕಾ ಕೆಲಸ ಮಾಡಿ ತದನಂತರ ಮಾಡಿ ಕಾರ್ಕಳಕ್ಕೆ ಶಿಫ್ಟ್ ಆಗಿದ್ದನು.  ಆ ಬಳಿಕ ಕಾರ್ಕಳದಿಂದ- ಮಂಗಳೂರಿಗೆ ಬಂದು ಬಾಂಬ್ ಫಿಕ್ಸ್ ಮಾಡಿ  ಕೂಡಲೇ ಶಿರಸಿ, ಶಿವಮೊಗ್ಗ ಮೂಲಕ ಬೆಂಗಳೂರಿಗೆ ಬಸ್ ನಲ್ಲಿ ಪರಾರಿಯಾಗಿ  ಕೊನೆಗೆ  ಶರಣಾಗಿದ್ದಾನೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next