Advertisement

ಡೆಂಗ್ಯೂ, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್: ಶಾಸಕ ಭರತ್ ಶೆಟ್ಟಿ ಆರೋಪ

09:54 AM Nov 10, 2019 | Naveen |

ಮಂಗಳೂರು: ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗಿನ ಸರಕಾರದ ನಿಯಮಗಳೇ ಸಾಂಕ್ರಾಮಿಕ ಕಾಯಿಲೆ ನಗರದಲ್ಲಿ ಉಲ್ಬಣಗೊಳ್ಳಲು ಕಾರಣವಾಗಿತ್ತು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಆರೋಪಿಸಿದರು.

Advertisement

ಅವರು ಮಂಗಳೂರಿನ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಲೇರಿಯಾ ಸೆಲ್ ಗೆ ಸಿಬಂದಿ ನೇಮಕ ಮಾಡಿ ಅವರನ್ನು ಮಲೇರಿಯಾ, ಡೆಂಗ್ಯೂ ಹರಡುವ ಪೀಕ್ ಸಮಯದಲ್ಲಿ ಮೂರು ತಿಂಗಳು ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ಹಾಕಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಧ್ಯವಾಗದೇ ಕಾಯಿಲೆ ಉಲ್ಬಣವಾಗಿತ್ತು ಎಂದರು.

ನೂತನ ತುಂಬೆ ವೆಂಟೆಡ್ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಕ್ರಮ ಪಾಲಿಸಲು ಪಾಲಿಕೆ ಮತ್ತು ಹಿಂದಿನ ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿತ್ತು. ಬಿಜೆಪಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ತಕ್ಷಣ ತಾನು ಮತ್ತು ವೇದವ್ಯಾಸ ಕಾಮತ್ ಸಿಎಂ ಭೇಟಿಯಾಗಿ ನಮ್ಮ ಕ್ಷೇತ್ರದ ನೀರಿನ ಸಮಸ್ಯೆ ವಿವರಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next