ಮಂಗಳೂರು: ಕೊಡಗಿನಲ್ಲಿ ಕೋವಿಡ್ 19 ಪಾಸಿಟಿವ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ನಲ್ಲಿದ್ದು, ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಹೆಚ್ವಿನ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು.
ಅವರು ಗುರುವಾರದಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಣ್ಗಾವಲನ್ನು ಸುಳ್ಯದಲ್ಲಿ ಹೆಚ್ಚುಗೊಳಿಸಿದ್ದೇವೆ. ಸುಳ್ಯ ಗಡಿಭಾಗದಲ್ಲಿ ನಿಗಾ ಜಾಸ್ತಿ ಮಾಡಲಾಗಿದೆ ಎಂದರು.
ಮಂಗಳೂರು ಏರ್ಪೋರ್ಟ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ವಿದೇಶದಿಂದ ಬಂದವರನ್ನು ಎ ಬಿ ಸಿ ಕ್ಯಾಟಗೆರಿ ಆಗಿ ವಿಂಗಡನೆ ಮಾಡಲಾಗುವುದು. ಥರ್ಮಲ್ ಸ್ಕಾನ್ ನಲ್ಲಿ ಲಕ್ಷಣ ಇದ್ದವರು ಎ ಕ್ಯಾಟಗೆರಿ. 65 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಇದ್ದವರು, ಆರೋಗ್ಯ ಸಮಸ್ಯೆ ಇದ್ದವರು ಬಿ ಕ್ಯಾಟಗೆರಿ. ಏನು ಲಕ್ಷಣ ಇಲ್ಲದವರು ಸಿ ಕ್ಯಾಟಗೆರಿಯಾಗಿ ವರ್ಗೀಕರಿಸಲಾಗುವುದು. ಎ ಕ್ಯಾಟಗೆರಿಯವರು ಸೀದಾ ಆಸ್ಪತ್ರೆಗೆ. ಬಿ ಕ್ಯಾಟಗೆರಿಯವರು ಸರ್ಕಾರಿ ಕ್ವಾರಂಟೈನ್ ಸೆಂಟರ್ ಗಳಿಗೆ. ಸಿ ಕ್ಯಾಟಗೆರಿಯವರು ಹೋಮ್ ಕ್ವಾರಂಟೈನ್ ಗೆ ರವಾನೆ ಮಾಡಲಾಗುವುದು ಎಂದು ತಿಳಿಸಿದರು.
ಅದಷ್ಟು ಜನರ ಗುಂಪನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್, ಆರ್.ಟಿ.ಓ, ಉಪ ನೋದಾವಣಿ, ಕೃಷಿ, ತೋಟಗಾರಿಕಾ, ಸಮಾಜ ಕಲ್ಯಾಣಯಂತಹ ಇಲಾಖೆಯಲ್ಲಿ ಕೆಲವು ಸೇವೆಗಳನ್ನು ಮಾರ್ಚ್ 31 ರವೆಗೆ ಸ್ಥಗಿತಗೊಳಿಸಲಾಗಿದ್ದು, ಕಚೇರಿಗಳು ಎಂದಿನಂತೆ ನಡೆಯುತ್ತದೆ. ಆದರೆ ಅಗತ್ಯ ತುರ್ತು ಸೇವೆಗಳಿಗೆ ಈ ಆದೇಶವು ಅನ್ವಯವಾಗುವುದಿಲ್ಲ ಎಂದರು.