Advertisement

ಚಿನ್ನ, ನಗದು ದೋಚುತ್ತಿದ್ದ ಏಳು ಆರೋಪಿಗಳ ಬಂಧನ; 25 ಲಕ್ಷ ರೂ. ಮೌಲ್ಯದ ಸೊತ್ತು ವಶ

09:32 AM Aug 28, 2019 | sudhir |

ಮಂಗಳೂರು: ಚಿನ್ನಾಭರಣ ಮಳಿಗೆಗಳಿಗೆ ಬರುವ ಗ್ರಾಹಕರು ಹಾಗೂ ಅಂಗಡಿ ಮಾಲಕರನ್ನು ಬೆದರಿಸಿ ಚಿನ್ನ ಹಾಗೂ ನಗದು ದೋಚುತ್ತಿದ್ದ ಏಳು ಮಂದಿ ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಉಪ್ಪಿನಂಗಡಿ ನಿವಾಸಿ ಅಬ್ದುಲ್‌ ಮಜೀದ್‌ ಎಚ್‌. (32), ಬಂಟ್ವಾಳ ತಾಲೂಕಿನ ಪೆರಮೊಗರು ಕೆದಿಲ ನಿವಾಸಿ ಮುಹಮ್ಮದ್‌ ಶಾಫಿ ಯಾನೆ ಶಾಫಿ (24), ಕೂಲಾ°ಡು ನಿವಾಸಿ ಆಸಿಫ್ ಕೆ. (25), ಬುಡೋಳಿ ಪೆರಾಜೆ ನಿವಾಸಿ ಮುಹಮ್ಮದ್‌ ನಾಸೀರ್‌ (20), ಪುದು ನಿವಾಸಿ ಮನ್ಸೂರ್‌ ಅಲಿ ಯಾನೆ ಮನ್ಸೂರ್‌ (30), ಫ‌ರಂಗಿಪೇಟೆ ನಿವಾಸಿಗಳಾದ ಮುಹಮ್ಮದ್‌ ಸೈಯದ್‌ ಯಾನೆ ಮೋನು (31) ಹಾಗೂ ಅಹ್ಮದ್‌ ಬಶೀರ್‌ ಯಾನೆ ಬಶೀರ್‌ (29) ಬಂಧಿತ ಆರೋಪಿಗಳು.

ಸುಲಿಗೆ ಪ್ರಕರಣದ 6 ಆರೋಪಿಗಳ ಜತೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಓರ್ವ ಹಳೇ ಆರೋಪಿಯನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಕಾರ್‌ಸ್ಟ್ರೀಟ್‌ನ ಬಳಿ ಖಾಸಗಿ ಶಾಲೆಯೊಂದರ ಸಮೀಪ ಆ.13ರಂದು ಆರೋಪಿಗಳು ಕಾರು ಮತ್ತು ಬೈಕ್‌ನಲ್ಲಿ ಬಂದು ಚಿನ್ನಾಭರಣ ಅಂಗಡಿಗಳ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹಾಗೂ ವ್ಯಾಪಾರ ಮುಗಿಸಿ ಹೋಗುವ ಅಂಗಡಿ ಮಾಲಕರನ್ನೂ ಅಡ್ಡಗಟ್ಟಿ ಹೆದರಿಸಿ, ಅವರಲ್ಲಿದ್ದ ಹಣ ಮತ್ತು ಚಿನ್ನವನ್ನು ಸುಲಿಗೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ವಿಚಾರಣೆಯಲ್ಲಿ ಆರೋಪಿಗಳು ಸುಲಿಗೆ ನಡೆಸುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮಂಗಳೂರು ಉತ್ತರ ಪೊಲೀಸ್‌ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಚಿನ್ನದ ವ್ಯಾಪಾರಿಗಳ ನಗದು ಮತ್ತು ಚಿನ್ನವನ್ನು ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್, ಮಾರುತಿ ಸೆಲೆರಿಯೋ, ಮಾರುತಿ ರಿಡ್ಜ್, ಟೋಯೋಟಾ ಗ್ಲಾಂಜಾ ಕಾರುಗಳು, ಬಜಾಜ್‌ ಕಂಪೆನಿಯ ಬೈಕ್‌, ಸುಮಾರು 140 ಗ್ರಾಂ ಚಿನ್ನ,ಹಾಗೂ 5.12 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ಉತ್ತರ (ಬಂದರ್‌) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನು ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌.ಹರ್ಷಅವರ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಶು ಗಿರಿ, ಲಕ್ಷ್ಮೀಗಣೇಶ್‌, ಎಸಿಪಿ ಭಾಸ್ಕರ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಉತ್ತರ ಪೊಲೀಸ್‌ ಠಾಣಾ ನಿರೀಕ್ಷಕ ಗೋವಿಂದರಾಜು ಬಿ., ಪಿಎಸ್‌ಐ ಸುಂದರ್‌ ಮತ್ತು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್‌ ಉಪ ನಿರೀಕ್ಷಕ ಪ್ರದೀಪ್‌ ಟಿ.ಆರ್‌. ಮತ್ತು ಸಿಬ್ಬಂದಿ ಗಂಗಾಧರ್‌ ಎನ್‌., ವೆಲೆಸ್ಟೀನ್‌ ಜಾರ್ಜ್‌ ಡಿಸೋಜ, ವಿಶ್ವನಾಥ, ಸಂತೋಷ ಸಸಿಹಿತ್ಲು, ಕಿಶೋರ್‌ ಕೋಟ್ಯಾನ್‌, ನಾಗರಾಜ ಚಂದರಗಿ, ಭೀಮಪ್ಪ ಉಪ್ಪಾರ, ರಮೇಶ ಲಮಾಣಿ, ಅಂಜನಪ್ಪ ಹಾಗೂ ಮಂಗಳೂರು ಉತ್ತರ ಠಾಣಾ ಎಎಸ್‌ಐ ಪದ್ಮನಾಭ ಮತ್ತು ಜಗದೀಶ್‌ ಹಾಗೂ ಸಿಬ್ಬಂದಿ ಸುಜನ್‌ ಶೆಟ್ಟಿ, ಚಿದಾನಂದ, ತಿಪ್ಪಾರೆಡ್ಡಿ, ಬಸವರಾಜ, ಮಹಾದೇವ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next