ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ ಸಹಿತ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನೆರವೇರಿತು.
Advertisement
ಶುಕ್ರವಾರ ಬೆಳಗ್ಗೆ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಪುಷ್ಪಾಲಂಕಾರ ಮಹಾ ಪೂಜೆ ನೆರವೇರಿತು. ರಾತ್ರಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಬಳಿಕ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನಡೆದು ಅವಭೃಥ ಸ್ನಾನ ನಡೆಯಿತು. ಅ. 16ರಂದು ರಾತ್ರಿ 7 ರಿಂದ 8 ಗಂಟೆಯ ವರೆಗೆ ಭಜನೆ, ರಾತ್ರಿ 7.30ಕ್ಕೆ ಗುರುಪೂಜೆ ನಡೆಯಲಿದೆ.
ಸಂಜೆ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ಸೇವೆ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.ಈ ಬಾರಿ ದಸರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ದ್ದರು. ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ, ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ವಿಧಾನಪರಿಷತ್ ಸದಸ್ಯಹರೀಶ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷಹರಿಕೃಷ್ಣ ಬಂಟ್ವಾಳ, ದೇವಸ್ಥಾನದ ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವಸ್ಥಾನದ ಅಭಿವೃದ್ಧಿಮಂಡಳಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ| ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್, ಜಯ ವಿಕ್ರಮ್, ರಾಧಾಕೃಷ್ಣ, ಎಚ್.ಎಸ್. ಜೈರಾಜ್, ಶೈಲೇಂದ್ರ ಸುವರ್ಣ, ರಮಾನಾಥ್ ಕರಂದೂರು, ಲೀಲಾಕ್ಷ ಕರ್ಕೇರ, ಸೂರ್ಯಕಾಂತ್ ಜೆ. ಸುವರ್ಣ, ಚಂದನ್‌ದಾಸ್, ಗೌರವಿ ಪಿ.ಕೆ.,ಕಿಶೋರ್ ದಂಡೆಕೇರಿ ಉಪಸ್ಥಿತರಿದ್ದರು.
Related Articles
Advertisement
ಕೊಲ್ಲೂರು: ರಥೋತ್ಸವಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ. 14ರಂದು ಚಂಡಿಕಾ ಯಾಗ, ಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ ಹಾಗೂ ರಾತ್ರಿ ರಥೋತ್ಸವ ಸರಳವಾಗಿ ನಡೆಯಿತು. ನವರಾತ್ರಿ ರಥೋತ್ಸವದ ಸಂದರ್ಭ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಬಹುತೇಕ ಸ್ಥಳೀಯರು ಮಾತ್ರ ರಥೋತ್ಸವದಲ್ಲಿ ಪಾಲ್ಗೊಂಡರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾ ಧಿಕಾರಿ ಮಹೇಶ್, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ ಕಿಣಿ, ಸಂಧ್ಯಾ ರಮೇಶ, ಗೋಪಾಲಕೃಷ್ಣ, ಶೇಖರ ಪೂಜಾರಿ ಉಪಸ್ಥಿತರಿದ್ದರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಮ್ಮ ದೇವಿ ನಾರಾಯಣಿ ಎಂಬ ಉದ್ಘೋಷದೊಡನೆ ಭಕ್ತರು ದೇವಿ ಸ್ತ್ರೋತ್ರವನ್ನು ಜಪಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ ಪೂಂಜ ಶ್ರೀದೇವಿಯ ದರ್ಶನ ಪಡೆದರು. ಶ್ರೀಕೃಷ್ಣ ಮಠದಲ್ಲಿ ವಿಜಯದಶಮೀ ಉತ್ಸವ
ಉಡುಪಿ: ಶ್ರೀಕೃಷ್ಣ ಮಠ ಶುಕ್ರವಾರ ವಿಜಯದಶಮೀ ಮತ್ತು ಮಧ್ವಜಯಂತಿ ಉತ್ಸವವನ್ನು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆಚರಿಸಲಾಯಿತು. ನವರಾತ್ರಿ ಎಲ್ಲ ದಿನಗಳಲ್ಲಿ ಶ್ರೀಕೃಷ್ಣ ದೇವರಿಗೆ ದೇವಿ ಅಲಂಕಾರವನ್ನು ನಡೆಸಿ ಪೂಜಿಸಿದ್ದು ವಿಜಯದಶಮಿಯಂದು ಸಮಾಪನಗೊಂಡಿತು. ಶ್ರೀಕೃಷ್ಣ ಮಠದಲ್ಲಿ ಕದಿರು ಕಟ್ಟುವ ಹಬ್ಬವನ್ನು ಆಚರಿಸಲಾಯಿತು. ಸೋದೆ ಮಠದಿಂದ ಭತ್ತದ ಕದಿರುಗಳನ್ನು ಮೆರವಣಿಗೆಯಲ್ಲಿ ತಂದು ಶ್ರೀಕೃಷ್ಣ ಮಠದಲ್ಲಿ ಒಂದೇ ದಿನ ತೆರೆಯುವ ಪೂರ್ವದ್ವಾರದ ಮೂಲಕ ಒಳಪ್ರವೇಶಿಸಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು. ಮಧ್ವಾಚಾರ್ಯರ ಕಾಲದಿಂದ ಬಂದ ಅಕ್ಷಯ ಪಾತ್ರೆಗೆ ಹಿಂದಿನ ವರ್ಷ ತುಂಬಿದ ಕದಿರನ್ನು ತೆಗೆದು ಹೊಸ ಕದಿರುಗಳನ್ನು ತುಂಬಿಸಲಾಯಿತು.