Advertisement

ದ.ಕ.: ಸಾವಿರದ ಗಡಿ ದಾಟಿದ ಕೋವಿಡ್‌ ಪ್ರಕರಣ, ಉಡುಪಿ: 801 ಮಂದಿಗೆ ಪಾಸಿಟಿವ್‌

10:47 AM Jan 19, 2022 | Team Udayavani |

ಮಂಗಳೂರು, ಜ. 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ವರದಿ ಮತ್ತು ಪಾಸಿಟಿವಿಟಿ ದರ ಏರಿಕೆ ಕಾಣುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ 1,058 ಮಂದಿಗೆ ಕೊರೊನಾ ದೃಢಪಟ್ಟಿದೆ. 275 ಮಂದಿ ಗುಣಮುಖರಾಗಿದ್ದಾರೆ. 4,964 ಸಕ್ರಿಯ ಪ್ರಕರಣಗಳಿವೆ. ಶೇ. 10.76 ಪಾಸಿಟಿವಿಟಿ ದರ ದಾಖಲಾಗಿದೆ.

Advertisement

ಹಲವು ತಿಂಗಳ ಬಳಿಕ ಇದೀಗ ದಿನದ ಕೋವಿಡ್‌ ಪ್ರಕರಣ ಸಾವಿರದ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಕಳೆದ ಒಂದು ತಿಂಗಳ ಹಿಂದೆ ಡಿ. 18ರಂದು ಜಿಲ್ಲೆಯಲ್ಲಿ ಶೇ. 0.26ರಷ್ಟು ಪಾಸಿಟಿವಿಟಿ ದರ ದಾಖಲಾಗಿತ್ತು. ಸದ್ಯ ಜ. 18ರಂದು ಶೇ. 10.76ಕ್ಕೆ ಏರಿಕೆ ಕಂಡಿದೆ. ಅದರಲ್ಲೂ ಈ ಮಾಸಾರಂಭದಿಂದ ಕೋವಿಡ್‌ ಪ್ರಕರಣ ಏಕಾಏಕಿ ಏರಿಕೆ ಕಂಡಿದೆ.

ಸಕ್ರಿಯ ಪ್ರಕರಣ:
ದ.ಕ.ಕ್ಕೆ 5ನೇ ಸ್ಥಾನ ರಾಜ್ಯದಲ್ಲಿ ಸದ್ಯ ಅತೀ ಹೆಚ್ಚು ಸಕ್ರಿಯ ಪ್ರಕರಣ ಹೊಂದಿರುವ ಜಿಲ್ಲೆಗಳ ಪೈಕಿ ದ.ಕ. ಜಿಲ್ಲೆ 5ನೇ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ 1,78,328, ಮೈಸೂರು ಜಿಲ್ಲೆಯಲ್ಲಿ 8,401, ತುಮಕೂರಿನಲ್ಲಿ 7,958 ಮತ್ತು ಹಾಸನ ಜಿಲ್ಲೆಯಲ್ಲಿ 6,806 ಪ್ರಕರಣ ಇದ್ದು ಅನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ (4,964) ಇದೆ.

ಜಿಲ್ಲೆಯೆಲ್ಲೆಡೆ ಶೀತ-ಜ್ವರ
ಕೋವಿಡ್‌ ತೀವ್ರತೆ ಹೆಚ್ಚಾಗುತ್ತಿದ್ದಂತೆ ಇದೀಗ ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. ಸಾರ್ವಜನಿಕರಲ್ಲಿ ಸದ್ಯ ಶೀತ, ಜ್ವರ, ಗಂಟಲುನೋವು ಬಾಧೆ ಕಾಣಿಸಿಕೊಳ್ಳುತ್ತಿದ್ದು, ಈ ರೋಗದ ಕುರಿತು ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಉಡುಪಿ: 801 ಮಂದಿಗೆ ಪಾಸಿಟಿವ್‌
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 801 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ ಶೇ. 21.62ಕ್ಕೆ ಏರಿಕೆಯಾಗಿದೆ. 3,672 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 95 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.4,301 ಪ್ರಕರಣಗಳು ಸಕ್ರಿಯವಾಗಿವೆ. 150 ಮಂದಿ ಕೋವಿಡ್‌ ಸೋಂಕಿಗಾಗಿ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಕಾಸರಗೋಡು: 606 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 606 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೇರಳದಲ್ಲಿ 28,481 ಮಂದಿಗೆ ಕೊರೊನಾ ದೃಢಪಟ್ಟಿದೆ.

ಬಿಗು ನಿಯಂತ್ರಣ
ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡು ತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ವಿವಾಹ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ 50 ಎಂದು ನಿಗದಿಪಡಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‌ ರಣ್‌ವೀರ್‌ ಚಂದ್‌ ಆದೇಶ ಹೊರಡಿಸಿದ್ದಾರೆ.

ಕೊಡಗು: 816 ಮಂದಿಗೆ ಕೊರೊನಾ ಮಡಿಕೇರಿ: ಕೊಡಗಿನಲ್ಲಿ ಮಂಗಳವಾರ ಹೊಸದಾಗಿ 81 ಕೊರೊನಾ ಕೇಸು ದೃಢಪಟ್ಟಿದೆ.

29 ಕಟ್ಟಡ ಕಾರ್ಮಿಕರಿಗೆ ಕೋವಿಡ್‌
ಮಡಿಕೇರಿಯ ಗಾಂಧಿ ಮೈದಾನ ಮುಂದೆ ನಿರ್ಮಾಣ ಹಂತ ದಲ್ಲಿರುವ ಬಹು ಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ 29 ಮಂದಿ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಕೆಲ ದಿನಗಳ ಹಿಂದೆ ಅಸ್ಸಾಂ ಮತ್ತು ಝಾರ್ಖಂಡ್‌ನಿಂದ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next