Advertisement

ಮಂಗಳೂರು: ಡೆಂಗ್ಯೂ ಪ್ರದೇಶದಲ್ಲಿ ಆರೋಗ್ಯ ಶಿಬಿರ ಮುಂದುವರಿಕೆ

02:10 AM Jun 26, 2019 | Team Udayavani |

ಮಂಗಳೂರು: ಶಂಕಿತ ಡೆಂಗ್ಯೂ ಪೀಡಿತರ ಆರೋಗ್ಯ ತಪಾಸಣೆ ಸಹಿತ ಅಗತ್ಯ ಕ್ರಮಗಳಿಗಾಗಿ ಆರೋಗ್ಯ ಇಲಾಖೆಯು ಅರೆಕೆರೆ ಬೈಲು ಮತ್ತು ಗೋರಕ್ಷದಂಡು ಪರಿಸರದಲ್ಲಿ ಆರೋಗ್ಯ ಶಿಬಿರವನ್ನು ಮುಂದುವರಿಸಿದೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ಸೋಮವಾರದಿಂದಲೇ ಶಿಬಿರ ನಡೆಯುತ್ತಿದ್ದು, ಬುಧವಾರ ತನಕ ಮುಂದುವರಿಯಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ (ಪ್ರಭಾರ) ಡಾ| ನವೀನ್‌ಚಂದ್ರ ತಿಳಿಸಿದ್ದಾರೆ. ಮಂಗಳವಾರ 6 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಡೆಂಗ್ಯೂ ಹೋಲುವ ಜ್ವರ ಕಂಡು ಬಂದಿದ್ದರೂ ಡೆಂಗ್ಯೂ ಜ್ವರ ಅಲ್ಲ ಎಂದವರು ತಿಳಿಸಿದ್ದಾರೆ.

ಕರ್ತವ್ಯದಿಂದ ಬಿಡುಗಡೆ

ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌ಕುಮಾರ್‌ ಸಿ.ಎಚ್. ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಡಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.

6 ಮಂದಿಯಲ್ಲಿ ದೃಢ

Advertisement

40ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 6 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next