Advertisement

Mangalore: ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ

05:09 PM Aug 09, 2023 | Team Udayavani |

ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದ 2023ರ ವಾರ್ಷಿಕ ಪರೀಕ್ಷೆಯಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ 5ನೇ ಹಾಗೂ 6ನೇ Rank ಗಳಿಸಿದ ಕುಮಾರಿ ಫೀನಾ ಹಕೀಮ್ ಮತ್ತು ಕುಮಾರಿ ಹರ್ಷಿತ ಶೆಟ್ಟಿಗಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ| ರಮೀಝ್ ಎಂ.ಕೆ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಮುಂದೆ ತಮ್ಮ ತಮ್ಮ ವಿಭಾಗದಲ್ಲಿ ಅತ್ಯಧಿಕ ರಾಂಕ್ ಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಹೆಸರನ್ನು ತರಬೇಕೆಂದು ಹೇಳಿದರು.

ಪಿ. ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ| ಸರ್ಫಾಝ್ ಹಾಸಿಮ್ ಜೆ .ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಯಜ್ನೀಶ್ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು.

ಈ ಕಾರ್ಯಕ್ರಮದಲ್ಲಿ ಕುಮಾರಿ ಫೀನಾ ಹಕೀಮ್ ಮತ್ತು ಕುಮಾರಿ ಹರ್ಷಿತ ಶೆಟ್ಟಿಗಾರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಕಾಲೇಜಿನ ಪೇಸ್ ನ್ಯೂಸ್ ಬುಲೆಟಿನ್ 2023 ಸಂಚಿಕೆ 3 ನ್ನು ಬಿಡುಗಡೆಗೊಳಿಸಲಾಯಿತು .

ಪಿ.ಎ. ವಿದ್ಯಾಸಂಸ್ಥೆಯ ಎ.ಜಿ.ಎಂ. ಸರ್ಫುದ್ದೀನ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಡಾ| ಶರ್ಮಿಳಾ ಕುಮಾರಿ ರವರು ಅತಿಥಿಗಳನ್ನು ಸ್ವಾಗತಿಸಿದರು. ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾಣಣ ಕೃಷ್ಣ ಪ್ರಸಾದ್ ರವರು ಧನ್ಯವಾದ ಗೈದರು. ಎಂ.ಬಿ.ಎ ವಿಭಾಗದ ನಿರ್ದೇಶಕ ಹಾಗೂ ಡೀನ್, (ವಿದ್ಯಾರ್ಥಿ ಕಲ್ಯಾಣ ಅಧಿಕಾರಿ) ಡಾ| ಸಯ್ಯದ್ ಅಮೀನ್, ಪಿ.ಎ. ಟ್ರಸ್ಟ್ ನ ವಿವಿಧ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ, ಡಾ| ಸರ್ಫಾಝ್ ಹಾಸಿಮ್ ಜೆ, ಪ್ರೊ. . ಸೂಫಿ, ಡಾ| ಸಲೀಮುಲ್ಲಾ ಖಾನ್, ಡಾ| ಸಜೀಸ್ ರಘುನಾಥನ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಕಾಲೇಜಿನ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಇಸ್ಮಾಯಿಲ್ ಶಾಫಿ, ಬಯೋಟೆಕ್ನಾಲಜಿ ವಿಭಾದ ಡಾ| ರೊನಾಲ್ಡ್ ವಾಲ್ಡರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ| ಇಕ್ಬಾಲ್ ರವರು ಕಾರ್ಯಕ್ರಮವನ್ನು ಆಯೋಜಿಸಿದರು. ಕುಮಾರಿ ಬುಶೈರಾ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next