Advertisement
ಪೊಲೀಸರು ಜಪ್ತಿ ಮಾಡಿದ ಸೊತ್ತುಗಳನ್ನು ವಾರಸುದಾರರಿಗೆ ಮರಳಿಸುವ ಕವಾಯತು ಶುಕ್ರವಾರ ನಗರದ ನೆಹರೂ ಮೈದಾನಿನಲ್ಲಿ ಜರಗಿದ್ದು, ಸೊತ್ತುಗಳನ್ನು ಕಮಿಷನರ್ ವಾರಸುದಾರರಿಗೆ ಹಸ್ತಾಂತರಿಸಿದರು.2018ನೇ ಸಾಲಿನಲ್ಲಿ ಒಟ್ಟು 4,30,00,000 ರೂ. ಮೌಲ್ಯದ ಸೊತ್ತು ಕಳವಾಗಿದ್ದು ಈ ಪೈಕಿ 3,40,00,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ. 2019ನೇ ಸಾಲಿನಲ್ಲಿ ಒಟ್ಟು 65,00,000 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದು, ಈ ಪೈಕಿ 32,00,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ವಿವರಿಸಿದರು. ಪ್ರಕರಣಗಳ ತನಿಖೆ ನಡೆಸಿ, ಅವುಗಳನ್ನು ಭೇಧಿಸುವಲ್ಲಿ ಯಶಸ್ವಿಯಾದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಯನ್ನು ಅವರು ಅಭಿನಂದಿಸಿದರು.
Related Articles
Advertisement
ಡ್ರಗ್ಸ್ ಮೂಲ ಶೋಧಯುವಜನರು ಡ್ರಗ್ಸ್, ಗಾಂಜಾ, ಎಂಡಿಎಂ, ಸಿಂಥೆಟಿಕ್ ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಈ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸಾಗಾಟದ ಮೂಲವನ್ನು ಪತ್ತೆ ಹಚ್ಚಿ ಸಂಪೂರ್ಣ ಮಟ್ಟ ಹಾಕಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು. ಶ್ರೀಲಂಕಾ ಬಾಂಬ್ ಸ್ಫೋಟ ಘಟನೆ
ಶ್ರೀಲಂಕಾ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ವಿಶೇಷ ನಿಗಾ ಇರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾಡ್ಜ್ , ಹೊಟೇಲ್ ತಪಾಸಣೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ವಿಶೇಷ ತಪಾಸಣೆ ಕೈಗೊಳ್ಳಲಾಗಿದೆ. ದಿನದ 24 ಗಂಟೆಯೂ ಪೊಲೀಸ್ ಬೀಟ್ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳ ಪಡಿಸಲಾಗುತ್ತಿದೆ ಎಂದರು.
ಡಿಸಿಪಿ ಹನುಮಂತರಾಯ ಸ್ವಾಗತಿಸಿದರು. ಡಿಸಿಪಿ ಲಕ್ಷ್ಮೀಗಣೇಶ್ ವಂದಿಸಿದರು. ಎಎಸ್‌ಐ ಹರಿಶ್ಚಂದ್ರ ಬೈಕಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.