Advertisement

ಮಂಗಳೂರು: ರಸ್ತೆ ದಾಟುವಾಗ ಬಸ್ ಢಿಕ್ಕಿ, ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

12:52 PM Mar 31, 2021 | Team Udayavani |

ಮಂಗಳೂರು: ರಸ್ತೆ ದಾಟುವಾಗ ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ  ಮರಕಡ ಜಂಕ್ಷನ್ ನಲ್ಲಿ ನಡೆದಿದೆ.

Advertisement

ಮೃತಪಟ್ಟ ವಿದ್ಯಾರ್ಥಿನಿಯನ್ನು ಕುಂಜತ್ತಬೈಲ್ ಜ್ಯೋತಿನಗರ ನಿವಾಸಿ ಪವಿತ್ರಾ (20) ಎಂದು ಗುರುತಿಸಲಾಗಿದೆ.

ಇಂದು(31-3-2021) ಬೆಳಗ್ಗೆ 8:50ರ ಆಸುಪಾಸಿನಲ್ಲಿ ಕಾಲೇಜಿಗೆಂದು ಹೊರಟಿದ್ದ ವಿದ್ಯಾರ್ಥಿನಿಗೆ ರಸ್ತೆ ದಾಟುವಾಗ ಬಸ್ ಢಿಕ್ಕಿಯಾಗಿದೆ ಎನ್ನಲಾಗಿದೆ. ಪರಿಣಾಮ ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈಕೆ ಮಂಗಳೂರು ವಿ.ವಿ. ಕಾಲೇಜಿನ ಎಂ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ.

ಇದನ್ನೂ ಓದಿ:  ಕಂದಕಕ್ಕೆ ಉರುಳಿದ ಬಸ್; ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ 23 ಜನರಿಗೆ ಗಾಯ

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: ವಾಯುಪಡೆಗೆ ಮತ್ತಷ್ಟು ಆನೆಬಲ: ಮತ್ತೆ ಮೂರು ರಫೇಲ್ ಜೆಟ್ ಫ್ರಾನ್ಸ್ ನಿಂದ ಭಾರತಕ್ಕೆ ಆಗಮನ

Advertisement

Udayavani is now on Telegram. Click here to join our channel and stay updated with the latest news.

Next