Advertisement

ಮಂಗಳೂರು ಮಹಾನಗರ: 2021ಕ್ಕೆ ಮಾಸ್ಟರ್‌ ಪ್ಲಾನ್‌ ಸಿದ್ಧ

12:31 AM Jun 27, 2020 | Sriram |

ವಿಶೇಷ ವರದಿ-ಮಹಾನಗರ: ಮಂಗಳೂರು ಮಹಾನಗರಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್‌ಪ್ಲ್ರಾನ್‌ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು 2021ಕ್ಕೆ ಸಿದ್ಧಗೊಳ್ಳಲಿದೆ.

Advertisement

ರಾಜ್ಯದ ಒಟ್ಟು 26 ಜಿಲ್ಲೆಗಳಲ್ಲಿ ನಗರಸಭೆ, ಪುರಸಭೆ ಹಾಗೂ ಮಹಾನಗರಗಳಲ್ಲಿ ಮಾಸ್ಟರ್‌ ಪ್ಲ್ರಾನ್‌ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.

ಮಂಗಳೂರು ನಗರಕ್ಕೆ ಸಂಬಂಧಪಟ್ಟು 2009ರಲ್ಲಿ ಮಾಸ್ಟರ್‌ಪ್ಲ್ರಾನ್‌ ಸಿದ್ಧಪಡಿಸ ಲಾಗಿತ್ತು. ಇದೀಗ 10 ವರ್ಷಗಳ ಬಳಿಕ ಹೊಸ ಮಾಸ್ಟರ್‌ಪ್ಲ್ರಾನ್‌ ಸಿದ್ಧಗೊಳ್ಳುತ್ತಿದೆ. ನಿಯಮಗಳ ಪ್ರಕಾರ ಪ್ರತಿವರ್ಷ 10 ವರ್ಷಗಳಿಗೊಮ್ಮೆ ಹೊಸದಾಗಿ ಮಾಸ್ಟರ್‌ಪ್ಲ್ರಾನ್‌ ರೂಪಿಸಬೇಕಾಗುತ್ತದೆ.

ಮುಂದಿನ ಮಾರ್ಚ್‌ಗೆ
ಕರಡು ಪ್ರತಿ ಸಲ್ಲಿಕೆ ನಿರೀಕ್ಷೆ
ನಗರ ಯೋಜನೆ ನಿರ್ದೇಶನಾಲಯ (ಡಿಟಿಸಿಪಿ) ನಿರ್ದೇಶನದಂತೆ ಮಂಗಳೂರಿ ನಲ್ಲಿ ಮಾಸ್ಟರ್‌ ಪ್ಲ್ರಾನ್‌ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು ಇದರ ಹೊಣೆಯನ್ನು ಸ್ಟೇಮ್‌ ಸಂಸ್ಥೆಗೆ ವಹಿಸಿಕೊಡಲಾಗಿದೆ. ಸಂಸ್ಥೆ ಈಗಾಗಲೇ ಕಾರ್ಯ ಆರಂಭಿಸಿದ್ದು 2020ರ ಡಿಸೆಂಬರ್‌ನೊಳಗೆ ಯೋಜನೆಯ ಕರಡು ಪ್ರತಿಯನ್ನು ಸಲ್ಲಿಸುವಂತೆ ಅವಧಿ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ದಿಂದಾಗಿ ಸುಮಾರು 3 ತಿಂಗಳು ಸಂಬಂಧಿತ ಕೆಲಸ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಮಾರ್ಚ್‌ ವೇಳೆಗೆ ಕರಡು ಪ್ರತಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಶುಕ್ರವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಅವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲೆಯ ಶಾಸಕರು ಹಾಗೂ ನಗರಾಭಿವೃದ್ಧಿ ಖಾತೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದಿದ್ದ ಸಭೆಯಲ್ಲಿ ಸಚಿವರು ಈಗಾಗಲೇ ನನೆಗುದಿಯಲ್ಲಿರುವ ನಗರ ಸಭೆ, ಪುರಸಭೆಗಳಲ್ಲಿ ಹಾಗೂ ಮಹಾ ನಗರಗಳಲ್ಲಿ ಮಾಸ್ಟರ್‌ ಪ್ಲ್ರಾನ್‌ಗಳನ್ನು ಕೂಡಲೇ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಯೋಜನೆಯ ಸ್ವರೂಪ
ಮಂಗಳೂರು ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವಂತೆ ಮೂಡ ವ್ಯಾಪ್ತಿಗೆ ಬರುವ ಪ್ರದೇಶಗಳ ಸುವ್ಯವಸ್ಥಿತ ಬೆಳವಣಿಗೆ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಮಾಸ್ಟರ್‌ ಪ್ಲ್ರಾನ್‌ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಜತೆ ಸಮಾಲೋಚನೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿ, ಪರಿಣಿತರಿಂದ ಸಲಹೆಗಳನ್ನು ಪಡೆದು ನಗರದಲ್ಲಿ ಪ್ರಸ್ತುತ ಆಗಿರುವ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಗಬೇಕಾದ ಬದಲಾವಣೆಗಳು, ನಗರದ ಭವಿಷ್ಯದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್‌ಪ್ಲ್ರಾನ್‌ ರೂಪಿಸಲಾಗುತ್ತದೆ. ರಸ್ತೆಗಳ ಅಭಿವೃದ್ಧಿ, ಮೂಲ ಸೌಕರ್ಯಗಳು, ಹೊಸ ವಲಯಗಳ ನಿಗದಿ, ನಿಯಮಾವಳಿಗಳು ನೂತನ ಯೋಜನೆಯಲ್ಲಿ ಒಳಗೊಳ್ಳುತ್ತವೆ. ಕರಡು ಪ್ರತಿ ಸಿದ್ಧಗೊಂಡ ಬಳಿಕ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಿ ಜನರಿಂದ ಆಕ್ಷೇಪ ಹಾಗೂ ಸಲಹೆಗಳನ್ನು ಆಹ್ವಾನಿಸಿ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಬಂದಿರುವ ಆಕ್ಷೇಪ ಹಾಗೂ ಸಲಹೆಗಳನ್ನು ಪರಿಶೀಲಿಸಿ ಅಂತಿಮವಾಗಿ ಮಾಸ್ಟರ್‌ ಪ್ಲ್ರಾನ್‌ ಸಿದ್ಧಗೊಳಿಸಿ ಅನುಮೋದನೆಗಾಗಿ ನಗರಾಭಿವೃದ್ದಿ ಇಲಾಖೆಗೆ ಸಲ್ಲಿಸಲಾಗುತ್ತದೆ.

 ಪ್ರಕ್ರಿಯೆ ನಡೆಯುತ್ತಿದೆ
ಮಂಗಳೂರು ನಗರಕ್ಕೆ ಸಂಬಂಧಪಟ್ಟು ಹೊಸ ಮಾಸ್ಟರ್‌ ಪ್ಲ್ರಾನ್‌ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷದ ಡಿಸೆಂಬರ್‌ನೊಳಗೆ ಕರಡು ಪ್ರತಿ ಸಿದ್ಧಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾದಿಂದ ಸುಮಾರು 3 ತಿಂಗಳು ಪ್ರಕ್ರಿಯೆಯಲ್ಲಿ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಇದಕ್ಕೆ ನಿಯೋಜನೆಗೊಳಿಸಿರುವ ಏಜೆನ್ಸಿ ಸಂಸ್ಥೆ ಹೆಚ್ಚು ಕಾಲಾವಕಾಶವನ್ನು ಕೋರಿದ್ದು ಮುಂದಿನ ವರ್ಷ ಪೂರ್ಣಗೊಳ್ಳಲಿದೆ.
-ದಿನೇಶ್‌ ಕುಮಾರ್‌, ಮುಡಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next