Advertisement
ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ), ಸಿಟಿ ಬಸ್ ಮಾಲಕರ ಸಂಘ, ಬೆಸೆಂಟ್ ಕಾಲೇಜು ಮತ್ತು ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ಗಳು ಸರ್ವೇ ಆರಂಭಿಸಿದ್ದಾರೆ. ಭವಿಷ್ಯದ ಸಿಟಿ ಬಸ್‌ಗೆ ಯಾವ ರೀತಿ ಬ್ರ್ಯಾಂಡ್ ಕಂಡುಕೊಳ್ಳಬೇಕು, ವ್ಯಾವಹಾರಿಕ ಸ್ಪರ್ಧೆ, ಸಿಟಿ ಬಸ್ ಕುರಿತು ವೆಬ್‌ಸೈಟ್ ರಚನೆ, ಆ್ಯಪ್ ಅಭಿವೃದ್ಧಿ, ಪ್ರಯಾಣಿಕರು- ಚಾಲಕ-ನಿರ್ವಾಹಕರ ಸಮನ್ವಯ ಮತ್ತಿತರ ವಿಚಾರಗಳ ಅವಲೋಕನಕ್ಕಾಗಿ ಸರ್ವೇ ಆಯೋಜಿಸಲಾಗಿದೆ.
Related Articles
Advertisement
ಸಮೀಕ್ಷೆಯಲ್ಲಿ ನೀವೂ ಪಾಲ್ಗೊಳ್ಳಿ : ಸಾರ್ವಜನಿಕರು ಕೂಡ ಈ ಆನ್‌ಲೈನ್ ಸಮೀಕ್ಷೆ ಯಲ್ಲಿ ಪಾಲ್ಗೊಂಡು ಭವಿಷ್ಯದಲ್ಲಿ ಸಿಟಿ ಬಸ್ ಯಾವ ರೀತಿ ಇರಬೇಕು, ಈಗಿರುವ ಸೇವೆಗಿಂತ ಉತ್ಕೃಷ್ಟ ಸೇವೆ ಹೇಗಿರಬೇಕು ಎಂಬ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಬಹುದಾಗಿದೆ. https://forms.gle/zDXsJqqeuQiAWjTH6 ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಸರ್ವೇಯಲ್ಲಿ ಪಾಲ್ಗೊಳ್ಳಬಹುದು.
ಬ್ರ್ಯಾಂಡ್ ಕಂಡುಕೊಳ್ಳಲು ಸಹಕಾರಿ : ಬಸ್ಗಳಿಗೆ ಬ್ರ್ಯಾಂಡ್ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸರ್ವೇ ಸಹಕಾರಿಯಾಗಲಿದೆ. ಮೊದಲನೇ ಹಂತದಲ್ಲಿ ಸಮೀಕ್ಷೆಯನ್ನು ಆಯೋಜಿಸಿದ್ದೇವೆ. ಸಾರ್ವಜನಿಕರು ಈ ಸರ್ವೇಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ಈ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೂ ನೀಡುತ್ತೇವೆ. –ಐಸಾಕ್ ವಾಜ್, ಕೆಸಿಸಿಐ ಅಧ್ಯಕ್ಷ
ವ್ಯವಸ್ಥಿತ ಸೇವೆಗೆ ಸರ್ವೇ : ನಗರದಲ್ಲಿ ವ್ಯವಸ್ಥಿತವಾಗಿ ಸಿಟಿ ಬಸ್ ಸೇವೆ ನೀಡಲಾಗುತ್ತಿದೆ. ಸದ್ಯ 320ಕ್ಕೂ ಮಿಕ್ಕಿ ಸಿಟಿ ಬಸ್‌ಗಳು ನಗರದಲ್ಲಿ ಸಂಚರಿಸುತ್ತವೆ. ನಮ್ಮ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಲು, ಪ್ರಯಾಣಿಕ ಸ್ನೇಹಿಯನ್ನಾಗಿಸಲು ಈ ಸರ್ವೇ ಆಯೋಜನೆ ಮಾಡಲಾಗಿದೆ. ಭವಿಷ್ಯದ ಸಿಟಿ ಬಸ್ ಸೇವೆ ಕುರಿತು ಸರ್ವೇಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು. –ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ