Advertisement
ಎಲೆಕ್ಟ್ರಿಕ್ ಎಂಜಿನ್ ಅಳವಡಿಸಿ ಬೆಳಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪಿದ್ದ ಈ ರೈಲು ಸಂಜೆ 16.20ಕ್ಕೆ ಚೆನ್ನೈಗೆ ಮರು ಪ್ರಯಾಣ ಬೆಳೆಸಿದೆ. ಮುಂದಿನ ದಿನಗಳಲ್ಲಿ ಈ ರೈಲು ಎಲೆಕ್ಟ್ರಿಕ್ ಎಂಜಿನ್ ಮೂಲಕವೇ ಓಡಾಟ ನಡೆಸಲಿದೆ. ಇದು ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ವಿದ್ಯುತ್ ರೈಲು ಎಂಬ ಕೀರ್ತಿಗೆ ಪಾತ್ರವಾಗಿದೆ.
Related Articles
ಎಲೆಕ್ಟ್ರಿಕ್ ಎಂಜಿನ್ ಅಳವಡಿಸಿದ್ದರಿಂದ ತತ್‌ಕ್ಷಣಕ್ಕೆ ಈ ರೈಲಿನ ವೇಗವರ್ಧನೆ ಆಗುವುದಿಲ್ಲ. ಮಳೆಗಾಲದ ಬಳಿಕ ಮುಂದಿನ ಅಕ್ಟೋಬರ್‌ನಲ್ಲಿ ಹೊಸ ವೇಳಾಪಟ್ಟಿ ಬಂದಾಗ ವೇಗದಲ್ಲಿ ಹೆಚ್ಚಳವಾಗಿ ಪ್ರಯಾಣಿಕರಿಗೆ ಒಂದಷ್ಟು ಸಮಯದ ಉಳಿತಾಯ ಆಗುವ ಸಾಧ್ಯತೆ ಇದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸದ್ಯದ ಮಟ್ಟಿಗೆ ಶೋರ್ನೂರಿನಲ್ಲಿ ಎಂಜಿನ್ ಬದಲಾಯಿಸುವ ಸಮಯ ಮಾತ್ರ ಉಳಿತಾಯವಾಗಲಿದೆ. ಇದುವರೆಗೆ ಈ ರೈಲು ಚೆನ್ನೈಯಿಂದ ಶೋರ್ನೂರು ತನಕ ಎಲೆಕ್ಟ್ರಿಕಲ್ ಎಂಜಿನ್‌ನಲ್ಲಿ ಹಾಗೂ ಆ ಬಳಿಕ ಡೀಸೆಲ್ ಎಂಜಿನ್‌ನಲ್ಲಿ ಓಡಾಡುತ್ತಿತ್ತು. ಈ ಎಂಜಿನ್ ಬದಲಾವಣೆಗೆ 10- 15 ನಿಮಿಷ ತಗುಲುತ್ತಿತ್ತು. ಇನ್ನು ಮುಂದೆ ಮಾರ್ಗ ಮಧ್ಯೆ ಎಂಜಿನ್ ಬದಲಾಯಿಸುವ ಆವಶ್ಯಕತೆ ಇರುವುದಿಲ್ಲ.