Advertisement
ಹಂಪನಕಟ್ಟೆಯಿಂದ ನೆಹರೂ ಮೈದಾನದ ಬಳಿ ಹಾಕಿ ಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸರ್ವಿಸ್ ಬಸ್‌ನಿಲ್ದಾಣವನ್ನು 1996ರ ಅ. 6ರಂದು ಸ್ಥಳಾಂತರಿಸಲಾಯಿತು. ಸುಮಾರು 21 ವರ್ಷಗಳಷ್ಟು ಸುದೀರ್ಘ ಅವಧಿ ಯಿಂದ ತಾತ್ಕಾಲಿಕ ನೆಲೆಯಲ್ಲಿದ್ದು, ಅಭಿ ವೃದ್ಧಿ ಕಾಣದೇ ತ್ರಿಶಂಕು ಸ್ಥಿತಿಯಲ್ಲಿದೆ. ಹಾಗಾಗಿ ತೇಪೆ ಕಾಮಗಾರಿಯಲ್ಲೇ ತೃಪ್ತಿ ಪಡುವಂತಾಗಿದೆ.
ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಪ್ರಸ್ತಾವಕ್ಕೆ ಮೂರು ದಶಕಗಳ ಇತಿಹಾಸ ವಿದೆ. ಬಸ್ ನಿಲ್ದಾಣವನ್ನು ನೆಹರೂ ಮೈದಾನದ ಹಾಕಿ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡುವಾಗಲೇ ಸೂಕ್ತ ಪ್ರದೇಶದಲ್ಲಿ ವಿಶಾಲ ಮತ್ತು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದು ಇಂದಿನವರೆಗೆ ಕಾರ್ಯಗತಗೊಂಡಿಲ್ಲ.
Related Articles
ಹಲವು ಪ್ರದೇಶಗಳು ಪ್ರಸ್ತಾಪಕ್ಕೆ ಬಂದು ಕಡೆಗೆ ಪಂಪ್‌ವೆಲ್‌ನಲ್ಲಿ ಒಟ್ಟು 17.5 ಎಕ್ರೆ ಜಾಗವನ್ನು ಅಂದಾಜಿಸ ಲಾಯಿತು. ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಂತೆ ಪ್ರಥಮ ಹಂತದಲ್ಲಿ ಸುಮಾರು 8 ಎಕ್ರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಪ್ರಸ್ತುತ ಉಳಿದ 7.33 ಎಕ್ರೆ ಪ್ರದೇಶಕ್ಕೆ ಮಣ್ಣು ತುಂಬಿಸುವ ಕಾರ್ಯ ಆರಂಭವಾಗಿ 3 ವರ್ಷಗಳಾಗಿವೆ. ಈ ವರ್ಷದ ಆರಂಭದಲ್ಲಿ ಇಲ್ಲಿ ಇಂಟರ್‌ಲಾಕ್ ಅಳವಡಿಸಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ ಸರ್ವಿಸ್ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು¤. ಮುಖ್ಯಮಂತ್ರಿಯ 2ನೇ ಹಂತದ 100 ಕೋ.ರೂ. ಅನುದಾನದಲ್ಲಿ ಒಂದಷ್ಟು ಹಣವನ್ನು ಇದರ ಅಭಿವೃದ್ಧಿಗೆ ವಿನಿಯೋಗಿಸುವ ಬಗ್ಗೆ ತೀರ್ಮಾನವಾಗಿತ್ತು.
Advertisement
ಯಾವುದೂ ಕೈಗೂಡಿಲ್ಲ. ಪ್ರಸ್ತುತ ಲಭ್ಯವಿರುವ 7.33 ಎಕ್ರೆ ಜಾಗದಲ್ಲಿ ಯಾವ ರೀತಿ ಸುಸಜಿcತ ಬಸ್‌ನಿಲ್ದಾಣ ನಿರ್ಮಿಸಬಹುದು ಎಂಬ ಬಗ್ಗೆ ಸಾಧ್ಯತಾ ವರದಿ ಹಾಗೂ ನಕ್ಷೆ ಸಿದ್ಧಗೊಂಡಿದೆ. ಸರಕಾರಿ- ಖಾಸಗಿ ನೆಲೆಯಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಖಾಸಗಿ ಬಿಡ್‌ದಾರರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಪಂಪ್‌ವೆಲ್‌ನಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಚಿಂತನೆ
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಕುರಿತಂತೆ ಪ್ರಕ್ರಿಯೆಗಳು ಜಾರಿಯಲ್ಲಿದೆ. ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣವಾಗುವವರೆಗೆ ತಾತ್ಕಾಲಿಕ ನೆಲೆಯಲ್ಲಿ ಬಸ್‌ನಿಲ್ದಾಣ ವ್ಯವಸ್ಥೆ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆದಿದೆ. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ನಿರ್ಧಾರವಾಗಬಹುದು. ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ಬಸ್‌ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಇದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಸಭೆ ಜರಗಿದ್ದು ಆಸಕ್ತರು ಭಾಗವಹಿಸಿದ್ದಾರೆ. ಮಂಗಳೂರಿನಲ್ಲಿ ವಾಹನದಟ್ಟಣೆ ನಿಭಾಯಿಸಲು ಬಸ್‌ನಿಲ್ದಾಣವನ್ನು ಪಂಪ್‌ವೆಲ್‌ಗೆ ಸ್ಥಳಾಂತರಿಸುವುದು ಅನಿವಾರ್ಯ.
– ಜೆ .ಆರ್.ಲೋಬೋ, ಶಾಸಕರು ಹೆದ್ದಾರಿ ಅಡಚಣೆ ನೆವ
ನಂತೂರು ವೃತ್ತದಿಂದ ತಲಪಾಡಿವರೆಗೆ ರಾ.ಹೆ. 66ನ್ನು ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಪಂಪ್‌ವೆಲ್‌ನಲ್ಲಿ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಈ ಹಂತದಲ್ಲಿ ಇಲ್ಲಿ ಬಸ್‌ನಿಲ್ದಾಣ ನಿರ್ಮಾಣವಾದರೆ ಸಂಚಾರ ವ್ಯವಸ್ಥೆ ಬಾಧಿತವಾಗಲಿದೆ. ತಾಂತ್ರಿಕ ಸಮಸ್ಯೆಗಳು ಉದ್ಭವವಾಗಲಿದೆ. ನಿಲ್ದಾಣಕ್ಕೆ ಬಸ್‌ಗಳ ಆಗಮನ ನಿರ್ಗಮನಕ್ಕೆ ಸಮಸ್ಯೆಯಾಗಲಿದೆ ಎಂಬ ವಾದವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಿಡುತ್ತಿದೆ.