Advertisement
ಇಂದು ಎಂದಿನಂತೆ ಸಿಟಿ ಬಸ್ ಸಂಚಾರಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ರವಿವಾರದಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಕರ್ಫ್ಯೂ ಸಡಿಲಗೊಳಿಸಿದ ಕಾರಣ ಸಿಟಿ ಬಸ್ ಸಂಚಾರ ಎಂದಿನಂತೆ ಇರುತ್ತದೆ’ ಎಂದಿದ್ದಾರೆ.
ರವಿವಾರ ಹಗಲು ಕರ್ಫ್ಯೂ ಹಿಂದೆಗೆಯುವ ಘೋಷಣೆ ಹೊರಡಿಸಲಾಗಿದ್ದು, ಉಡುಪಿಯಿಂದ ಮಂಗಳೂರು ಕಡೆ ಮತ್ತು ಮಂಗಳೂರಿನಿಂದ ಉಡುಪಿ ಕಡೆ ಎಕ್ಸ್‌ಪ್ರೆಸ್ ಬಸ್‌ಗಳು ರವಿವಾರ ಎಂದಿನಂತೆ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಕೆಎಸ್‌ಆರ್‌ಟಿಸಿ: 3 ಕೋಟಿ ರೂ.ಗೂ ಹೆಚ್ಚು ನಷ್ಟ
ಕರ್ಫ್ಯೂನಿಂದಾಗಿ 2 ದಿನಗಳಲ್ಲಿ ಕೆಎಸ್ಸಾರ್ಟಿಸಿಗೆ 3 ಕೋ.ರೂ.ಗೂ ಹೆಚ್ಚು ನಷ್ಟವಾಗಿದೆ.
ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ಸುಮಾರು 300ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಸಿಟಿ ಬಸ್‌ಗಳು ಸಂಚರಿಸುತ್ತವೆ. ಡಿ. 19ರ ಸಂಜೆ ಬಳಿಕ ಡಿ. 21ರ ವರೆಗೆ ಅವು ಸಂಚರಿಸಲಿಲ್ಲ. ಒಂದು ಬಸ್‌ನಲ್ಲಿ ಪ್ರತೀ ದಿನ ಸರಾಸರಿ ಸುಮಾರು 10 ಸಾವಿರ ರೂ. ಸಂಗ್ರಹವಾಗುತ್ತದೆ. ಎರಡೂವರೆ ದಿನಗಳಲ್ಲಿ ಸುಮಾರು 1.5 ಕೋಟಿ ರೂ.ಗೂ ಅಧಿಕ ನಷ್ಟ ಆಗಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಇಲ್ಲಿ ಸುಮಾರು 50 ಲಕ್ಷ ರೂ. ಸಂಗ್ರವಾಗುತ್ತದೆ. ಆದರೆ ಎರಡೂವರೆ ದಿನ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಸುಮಾರು 1.5 ಕೋಟಿ ರೂ. ನಷ್ಟವಾಗಿದೆ.