Advertisement

ಮಂಗಳೂರು:  ರಸ್ತೆ ಡಿವೈಡರ್‌ ಮೇಲೆ ನುಗ್ಗಿದ ಬಸ್‌

05:33 PM Aug 05, 2019 | Sriram |

ಮಂಗಳೂರು: ನಗರದ ಲಾಲ್‌ಬಾಗ್‌ ಸಮೀಪದ ಪಬ್ಟಾಸ್‌ ಐಸ್‌ಕ್ರೀಸ್‌ ಮಳಿಗೆಯ ಎದುರು ರವಿವಾರ ಖಾಸಗಿ ಸಿಟಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿ ಬೀದಿ ದೀಪದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮಗು ಸಹಿತ 8 ಮಂದಿ ಗಾಯಗೊಂಡಿದ್ದಾರೆ.

Advertisement

ಯಾವುದೇ ಪ್ರಾಣಾಪಾಯ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ ಚಾಲಕನ ವಿರುದ್ಧ ಅತಿವೇಗ, ಅಜಾಗ್ರತೆ ಮತ್ತು ನಿರ್ಲಕ್ಷದ ಚಾಲನೆ ವಿರುದ್ಧ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next