Advertisement
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನ ನಂ. 6 ಇ 6724 ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದಾಗ ಅದನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಯಿತು. ಬಳಿಕ ಜರಗಿದ ಸರಳ ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿದರು. ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಕೇಕ್ ಕತ್ತರಿಸಿದರು. ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್, ಶಾಸಕ ಜೆ.ಆರ್. ಲೋಬೋ ಮುಖ್ಯ ಅತಿಥಿಯಾಗಿದ್ದರು. ದ.ಕ. ಜನತೆಗೆ ಪೂರಕ ಸಚಿವ ರಮಾನಾಥ ರೈ ಮತ್ತು ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕಡಿಮೆ ಪ್ರಯಾಣ ದರದ ಇಂಡಿಗೋ ವಿಮಾನ ಸೇವೆ ಆರಂಭ ಗೊಂಡಿರುವುದರಿಂದ ಅವಿಭಜಿತ ದ.ಕ. ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಿದೆ. ಹೆಚ್ಚು ಮಂದಿ ವಿಮಾನ ಪ್ರಯಾಣವನ್ನು ಅವಲಂಬಿಸಲು ಪೂರಕವಾಗಿದೆ ಎಂದರು.
ಹೊರಡುವ ಸ್ಥಳ ನಿರ್ಗಮನ ಆಗಮನ ದರ
ಬೆಂಗಳೂರು 5.30(ಬೆಳಗ್ಗೆ) 6.30 1499 ಮಂಗಳೂರು 7.00 (ಬೆಳಗ್ಗೆ) 7.55 1499 ಬೆಂಗಳೂರು 2.55(ಮಧ್ಯಾಹ್ನ) 3.50 1499 ಮಂಗಳೂರು 4.20 (ಸಂಜೆ) 5.15 1499 ಮುಂಬಯಿ 9.40(ಬೆಳಗ್ಗೆ) 11.30 1799 ಮಂಗಳೂರು 12.05(ಮಧ್ಯಾಹ್ನ) 2.00 1799
ಮೇ 15ರಿಂದ ಆರಂಭಗೊಳ್ಳುವ ಇನ್ನೊಂದು ವಿಮಾನ ರಾತ್ರಿ 10 ಗಂಟೆಗೆ ಮಂಗಳೂರಿನಿಂದ ನಿರ್ಗಮಿಸಲಿದೆ.