Advertisement
ದೇಶಾದ್ಯಂತ ಸೀಮಿತ ಸಂಖ್ಯೆಯಲ್ಲಿ ರೈಲುಗಳ ಓಡಾಟ ಆರಂಭವಾಗಿದೆ. ಆದರೆ ನೈಋತ್ಯ ರೈಲ್ವೇಯ ಪ್ರಥಮ ಹಂತದ ಪಟ್ಟಿಯಲ್ಲಿ ಈ ರೈಲುಗಳ ಉಲ್ಲೇಖವಿಲ್ಲ. ಕರಾವಳಿಯಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರು ದೊಡ್ಡ ಸಂಖ್ಯೆ ಯಲ್ಲಿರುವುದರಿಂದ ಬೇಡಿಕೆ ಬೇಗನೆ ಫಲ ನೀಡುವ ನಿರೀಕ್ಷೆ ಇದೆ.
ಮೀಟರ್‌ಗೇಜ್ ಕಾಲದಿಂದಲೇ ಮಂಗಳೂರು-ಕಬಕ ಪುತ್ತೂರು ಮತ್ತು ಮಂಗಳೂರು-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವೆ ಲೋಕಲ್ ರೈಲುಗಳ ಓಡಾಟವಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಲೋಕಲ್ ರೈಲುಗಳ ಓಡಾಟವೂ ಸ್ಥಗಿತಗೊಂಡಿದೆ. ಅವುಗಳ ಓಡಾಟವನ್ನು ಆರಂಭಿಸುವಂತೆ ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಪ್ರಯಾ ಣಿಕರ ಹಿತರಕ್ಷಣ ವೇದಿಕೆಯು ಮೈಸೂರು ವಿಭಾಗೀಯ ರೈಲ್ವೇ ಮ್ಯಾನೇಜರ್‌ಗೆ ಪತ್ರ ಬರೆದಿದ್ದು, ಸಂಸದರ ಗಮನಕ್ಕೂ ತಂದಿದೆ. ಮಂಗಳೂರು-ಬೆಂಗಳೂರು, ಕಾರವಾರ-ಬೆಂಗಳೂರು ನಡುವಣ ರೈಲು ಸಂಚಾರವನ್ನು ಮತ್ತೆ ಆರಂಭಿಸುವಂತೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಪೂರಕ ಸ್ಪಂದನ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಏರುಪೇರಾದ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಲಾಗುವುದು.
– ನಳಿನ್ ಕುಮಾರ್ ಕಟೀಲು, ದ.ಕ. ಸಂಸದ