Advertisement
ಶುಕ್ರವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಹೈಸ್ಪೀಡ್ ಹೆದ್ದಾರಿಗಳ ನಿರ್ಮಾಣದಲ್ಲಿ ಮೊದಲನೇ ಹಂತಕ್ಕೆ ನಾಲ್ಕು ಹೆದ್ದಾರಿಗಳನ್ನು ಆಯ್ಕೆ ಮಾಡಿದ್ದು, ಅವುಗಳಲ್ಲಿ ಬೆಂಗಳೂರು -ಮಂಗಳೂರು ಒಂದಾಗಿದೆ. ಮುಂಬಯಿ-ಕೋಲ್ಕತ್ತಾ, ಲೂಧಿಯಾನ-ಕಾಂಡ್ಲಾ, ಪೋರ್‌ಬಂದರ್-ಸಿಲ್ಚಾರ್ ಹೈಸ್ಪೀಡ್ ಹೆದ್ದಾರಿಗಳು 3.8 ಲಕ್ಷ ಕೋ.ರೂ.ಗಳಲ್ಲಿ ನಿರ್ಮಾಣವಾಗಲಿವೆ. ಉತ್ಕೃಷ್ಟ ಮಟ್ಟದ ಈ ಹೆದ್ದಾರಿಯಿಂದ 4 ಗಂಟೆಗಳಲ್ಲಿ ಮಂಗಳೂರಿನಿಂದ ಬೆಂಗಳೂರು ತಲುಪಲು ಸಾಧ್ಯವಾಗಲಿದ್ದು, 5 ವರ್ಷದ ಒಳಗೆ ಈ ಯೋಜನೆ ಸಾಕಾರಗೊಳ್ಳಲಿದೆ ಎಂದರು.
ಜಗತ್ತಿನಲ್ಲಿ ಆರ್ಥಿಕ ಕುಸಿತ ಆದಾಗಲೂ ನೋಟು ಅಪನಗದೀಕರಣ ಮೂಲಕ ಭಾರತವನ್ನು ಆರ್ಥಿಕ ಸದೃಢತೆಗೆ ತಂದ ನರೇಂದ್ರ ಮೋದಿಯವರ ದಿಟ್ಟತನ ಎಲ್ಲರಿಗೂ ಮೆಚ್ಚುಗೆಯಾಗಿದೆ ಎಂದರು.
Related Articles
ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ 3 ವರ್ಷ ಅವಧಿಯಲ್ಲೇ ದ.ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ 13 ಸಾವಿರ ಕೋ. ರೂ. ಅನುದಾನ ಲಭಿಸಿದೆ ಎಂದರು.
Advertisement
ಸಚಿವರ ಭರವಸೆರೈಲ್ವೇಗೆ ಸಂಬಂಧಿಸಿ ಕುಡ್ಲ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಸೇರಿದಂತೆ 3-4 ಬೇಡಿಕೆಗಳು ಇವೆ. ಈ ಕುರಿತು ರೈಲ್ವೇ ಸಚಿವರಿಗೆ ವಿನಂತಿ ಮಾಡಲಾಗಿದ್ದು, ಅಕ್ಟೋಬರ್ ಅನಂತರ ಬೇಡಿಕೆಗಳನ್ನು ಈಡೇರಿಸುವುದಾಗಿ ರೈಲ್ವೇ ಸಚಿವರು ಭರವಸೆ ನೀಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಕಾರ್ಯದರ್ಶಿ ರಾಮದಾಸ್ ಹಾರಾಡಿ, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ್ ಮೊದಲಾದವರು ಉಪಸ್ಥಿತರಿದ್ದರು.