Advertisement

ಮಂಗಳೂರು;ಪಾರ್ಕ್‌ನಲ್ಲಿದ್ದ ಅನ್ಯಕೋಮಿನ ಜೋಡಿಗಳ ಮೇಲೆ ದಾಳಿ  

05:07 PM Jan 02, 2018 | |

ಮಂಗಳೂರು: ನಗರದ ಪಿಲಿಕುಳ ನಿಸರ್ಗ ಧಾಮದಲ್ಲಿ ಜೊತೆಯಲ್ಲಿದ್ದ 2 ಅನ್ಯಕೋಮಿನ ಜೋಡಿಯ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು,ಭಾರೀ ಚರ್ಚೆಗೆ ಕಾರಣವಾಗಿದೆ. 

Advertisement

ಹಿಂದೂ ಯುವತಿಯರಿಬ್ಬರು ಅನ್ಯ ಕೋಮಿನ ಯುವಕರೊಂದಿಗೆ ಪಾರ್ಕ್‌ನಲ್ಲಿದ್ದ ವೇಳೆ ಸಂಘಟನೆಯೊಂದರ ಕಾರ್ಯಕರ್ತರು ಎನ್ನಲಾದವರಿಂದ ದಾಳಿ ನಡೆದಿದೆ. 

ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು ಈ ವೇಳೆ ಪೊಲೀಸ್‌ ಸಿಬಂದಿಯ ಸಮ್ಮುಖದಲ್ಲೇ  ಯುವತಿಯೊಬ್ಬಳಿಗೆ ಯುವಕನೊಬ್ಬ ಥಳಿಸಿರುವುದು ಮಾಧ್ಯಮಗಳ ಕ್ಯಾಮಾರದಲ್ಲಿ ಸೆರೆಯಾಗಿದೆ. 

ಕಾವೂರು ಪೊಲೀಸರು ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಮೂಡು ಶೆಡ್ಡೆಯ ಸಂತೋಷ್‌ ಎಂದು ತಿಳಿದು ಬಂದಿದೆ. 

ಯುವತಿಯ ಸಂಬಂಧಿಕರ ಸೂಚನೆಯ ಮೇರೆಗೆ ದಾಳಿ ನಡೆಸಲಾಗಿದೆ ಎಂದೂ ಹೇಳಲಾಗುತ್ತಿದೆ. 

Advertisement

ನೈತಿಕ ಪೊಲೀಸ್‌ ಗಿರಿ ಎ ನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ‘ಈ ಬಗ್ಗೆ ಕ್ರಮ ಕೈಗೊಳ್ಳಲು ಅಲ್ಲಿನ ಎಸ್‌ಪಿಗೆ ತಿಳಿಸಿದ್ದೇನೆ. ಮಧ್ಯಾಹ್ನದ ವೇಳೆ ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದಿದ್ದಾರೆ. 

ಸಚಿವ ಯು.ಟಿ .ಖಾದರ್‌ ಅವರು ಪ್ರತಿಕ್ರಿಯೆ ನೀಡಿದ್ದು ‘ಯುವತಿಯ ಮೇಲೆ ಹಲ್ಲೆ ನಡೆದಿರುವುದು ತಪ್ಪು, ಪೊಲೀಸರ ಮುಂದೆ ಹಲ್ಲೆ ನಡೆದಿದ್ದರೆ ಆ ಸಿಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು.  ಈ ಪ್ರಕರಣದ ಕುರಿತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next