Advertisement
ಗ್ರಾಮೀಣ ಜನರಿಗೆ ತಲುಪದೆ ನಾಲ್ಕು ವರ್ಷಗಳಾದವುವಿವಿಧ ವರ್ಗಗಳ ಜನರಿಗೆ ಮುದ ನೀಡುವ ಜತೆ ಜಾಗೃತಿಯನ್ನೂ ಮೂಡಿ ಸುತ್ತಿದ್ದ ಮಂಗಳೂರು ಆಕಾಶವಾಣಿ ದ.ಕ., ಉಡುಪಿ, ಕಾಸರಗೋಡು ಸಹಿತ ಉದ್ದಗಲದ ಗ್ರಾಮೀಣ ಜನರಿಗೆ ತಲುಪದೆ ನಾಲ್ಕು ವರ್ಷಗಳಾಗಿವೆ. ಸರಿಸುಮಾರು ಇದೇ ಅವಧಿಯಲ್ಲಿ ಜನಪ್ರಿಯಗೊಂಡ “ಮನ್ ಕಿ ಬಾತ್’ ಕಾರ್ಯಕ್ರಮವನ್ನೂ ಕೇಳಲು ಈ ಜನರಿಗೆ ಸಾಧ್ಯವಾಗುತ್ತಿಲ್ಲ.
Related Articles
ಮೂಲಗಳ ಪ್ರಕಾರ ಕೇವಲ ಟವರ್ ಪುನರುಜ್ಜೀವನದ ಪ್ರಶ್ನೆಯಲ್ಲ. ಮಂಗಳೂರು ಆಕಾಶವಾಣಿಯೇ ಭವಿಷ್ಯದಲ್ಲಿ ಇನ್ನಿಲ್ಲವಾಗುವ ಭಯ ವಿದೆ. ಸುಮಾರು 15 ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿ ಯಲ್ಲಿ ಸುಮಾರು 150 ಸಿಬಂದಿಗಳಿದ್ದರೆ ಈಗ 50ಕ್ಕೆ ಇಳಿದಿದೆ. ವರ್ಗಾವಣೆ, ನಿವೃತ್ತಿಯಾದಾಗ ಬದಲಿ ನೇಮಕ ಗಳಿಲ್ಲ. ತುಳು ವಿಭಾಗದಲ್ಲಿದ್ದ ಡಾ| ಸದಾನಂದ ಪೆರ್ಲ ಕಲಬುರಗಿಗೆ, ನಾಟಕ ವಿಭಾಗದಲ್ಲಿದ್ದ ಡಾ| ಬಿ.ಎಂ. ಶರಭೇಂದ್ರಸ್ವಾಮಿ ರಾಯಚೂರಿಗೆ, ಕೊಂಕಣಿ ಕಾರ್ಯಕ್ರಮದಲ್ಲಿದ್ದ ಕನ್ಸೆಪಾr ಫೆರ್ನಾಂಡಿಸ್ ಬೆಂಗಳೂರಿಗೆ, ಫ್ಲೋರಿನ್ ರೋಚ್ ಕಾರವಾರಕ್ಕೆ ವರ್ಗಾವಣೆ ಗೊಂಡಿದ್ದಾರೆ. ನಿರ್ದೇಶಕರಾಗಿದ್ದ ವಸಂತ ಕುಮಾರ್ ಪೆರ್ಲ, ಕೃಷಿರಂಗದಲ್ಲಿದ್ದ ಎತ್ತಿದ ಕೈ ಎನಿಸಿದ್ದ ಸದಾನಂದ ಹೊಳ್ಳ ನಿವೃತ್ತಿಯಾಗಿದ್ದಾರೆ. ಹೀಗೆ ಮುಂದುವರಿದರೆ ಪ್ರಧಾನಿಯವರು “ಮನ್ ಕಿ ಬಾತ್’ ನಡೆಸಿದರೂ, ಅದಕ್ಕೆ ಜನಪ್ರಿಯತೆ ಇದ್ದರೂ ಸರಕಾರದ ಅಸಡ್ಡೆ ನೀತಿಯಿಂದ ಕೇಳುವ ಜನರಿಲ್ಲದೆ ಹೋಗುವ ಸಾಧ್ಯತೆ ಇದೆ. ಆಕಾಶವಾಣಿ ದನಿ ಮತ್ತೆ ಗ್ರಾಮೀಣ ಪ್ರದೇಶವನ್ನು ತಲುಪುವಂತಾಗಲು ಪ್ರಧಾನಿಯವರಿಗೆ ಬರೆಯುವ ಅಂಚೆ ಕಾರ್ಡ್ ಚಳವಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಟಾರ್ ಕಾರ್ಡ್ ಬರೆದು ಮುಂದಡಿ ಇಟ್ಟಿದ್ದಾರೆ. ಇಂತಹ ಕಾರ್ಡ್‌ಗಳು ಎಷ್ಟು ಸಂಖ್ಯೆಯಲ್ಲಿ ಪ್ರಧಾನಿ ಕಚೇರಿಯನ್ನು ತಲುಪುತ್ತದೋ ಅಷ್ಟು ವೇಗದಲ್ಲಿ ಆಕಾಶವಾಣಿ ದನಿ ಜನರಿಗೆ ಕೇಳಬಹುದು.
Advertisement
ಮೀಡಿಯಂ ವೇವ್ ತಂತ್ರಜ್ಞಾನದ ಟವರ್ ಸ್ಥಾಪನೆಗಿಂತ ಎಫ್ಎಂ ಟ್ರಾನ್ಸ್‌ಮೀಟರ್ ಸ್ಥಾಪನೆ ಸೂಕ್ತವಾಗಿದೆ. ಎಫ್ಎಂ ಟ್ರಾನ್ಸ್ ಮೀಟರ್ ಸ್ಥಾಪನೆಗೆ ಪ್ರಸ್ತಾವನೆ ಹೋಗಿದೆ. ಇತ್ತೀಚಿಗೆ ದಕ್ಷಿಣ ವಲಯದ ಎಂಜಿನಿಯರಿಂಗ್ ವಿಭಾಗ ಮತ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥರು ಬೇರೆ ಬೇರೆ ಕಾರಣಗಳಿಗೆ ಮಂಗಳೂರಿಗೆ ಬಂದಾಗ ವಿಷಯವನ್ನು ಪ್ರಸ್ತಾವಿಸಿದ್ದೇವೆ. ನಾವಿದರ ಬಗ್ಗೆ ಪಸ್ಯೂì ಮಾಡುತ್ತೇವೆ ಎಂದು ಹೇಳಿದ್ದಾರೆ.– ಉಷಾಲತಾ, ಮುಖ್ಯಸ್ಥರು, ಮಂಗಳೂರು ಆಕಾಶವಾಣಿ ಜನರ ಬೇಡಿಕೆ ಇದ್ದಲ್ಲಿ ಟವರ್ ಮರು ಸ್ಥಾಪಿಸಬಹುದು.
– ವಸಂತ ಕುಮಾರ ಪೆರ್ಲ,
ನಿವೃತ್ತ ಮಂಗಳೂರು ಆಕಾಶವಾಣಿ ನಿರ್ದೇಶಕರು ಚಳವಳಿಯಿಂದ ಪ್ರಯೋಜನ
ಈಗ ಅಂಚೆ ಕಾರ್ಡ್ ಚಳವಳಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಬೇಡಿಕೆಯನ್ನು ಪ್ರಧಾನಮಂತ್ರಿಯವರಿಗೆ ಕಾರ್ಡ್ ಮೂಲಕ ತಿಳಿಸಬೇಕು. ಹಿಂದೆ ಪ್ರಧಾನಿಯವರಿಗೆ ಪತ್ರ ಬರೆದು ಒತ್ತಾಯಿಸಿದಾಗ ಅವರು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದರು. ಯಾವ ರೀತಿಯಲ್ಲಿಯೂ ಇದು ಮುಂದೆ ಹೋಗಿಲ್ಲ. ಹೀಗಾಗಿ ಈ 2ನೇ ಹಂತದ ಜನರ ಹಕ್ಕೊತ್ತಾಯದ ಚಳವಳಿ ಪ್ರಯೋಜನ ತಂದೀತು.
– ರಾಮಕೃಷ್ಣ ಖಾರ್ವಿ, ಅಧ್ಯಕ್ಷರು, ಜನಾರ್ದನ ಮರವಂತೆ, ಸ್ಥಾಪಕ ಅಧ್ಯಕ್ಷರು, ಪ್ರಕಾಶ್ ಪಡಿಯಾರ್, ಸದಸ್ಯ, ಸಾಧನಾ ಸಮಾಜ ಸೇವಾ ವೇದಿಕೆ, ಮರವಂತೆ ಕೇಂದ್ರದ ಮೇಲೆ ಪ್ರಭಾವ ಬೀರಿದರೆ ಮಾತ್ರ ಸಾಧ್ಯ
ಜನಪ್ರತಿನಿಧಿಗಳಿಗೆ ಮನವಿ ಮಾಡಿ ಪತ್ರ ಬರೆದರೆ ಅವರು ಅದಕ್ಕೆ ತಮ್ಮ ಒಂದು ಪತ್ರವನ್ನು ಬರೆದು ಕೇಂದ್ರದ ಸಚಿವಾಲಯಕ್ಕೆ ರವಾನಿಸುತ್ತಾರೆ. ಇಂತಹ ಯಾವ ಪತ್ರಗಳೂ ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿರುವುದಿಲ್ಲ. ಎಷ್ಟೋ ಜನರು ಆಕಾಶವಾಣಿ ಅಧಿಕಾರಿಗಳಿಗೆ ಪತ್ರ ಬರೆದು, ದೂರವಾಣಿಯಲ್ಲಿ ಒತ್ತಾಯಿಸುವುದುಂಟು. ಇದು ದಿಲ್ಲಿಯ ಸಚಿವಾಲಯ ಮಟ್ಟದಲ್ಲಿ ಆಗುವ ಕೆಲಸವೇ ವಿನಾ ಸ್ಥಳೀಯವಾಗಿ ತೆಗೆದುಕೊಳ್ಳುವ ನಿರ್ಧಾರ ಆಗಿರುವುದಿಲ್ಲ. ಕರಾವಳಿಯ ಇಬ್ಬರು ಸಂಸದರು ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿ ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇದಕ್ಕಾಗಿ ಜನರು ಸಂಸದರಿಗೂ ಆಗ್ರಹಿಸಿ ಅಂಚೆ ಕಾರ್ಡ್ ಬರೆದರೆ ಇನ್ನೂ ಉತ್ತಮ.
– ಓರ್ವ ಆಕಾಶವಾಣಿ ಶೋತೃ -ಮಟಪಾಡಿ ಕುಮಾರಸ್ವಾಮಿ