Advertisement

ಮಂಗಳೂರು ವಿಮಾನ ನಿಲ್ದಾಣ: ಬಂದೂಕು ಮತ್ತು ಸ್ಪೋಟಕ ತಂದಿದ್ದ ವ್ಯಕ್ತಿ ಬಂಧನ

02:01 PM Dec 04, 2021 | Team Udayavani |

ಮಂಗಳೂರು: ಅಂತ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದೂಕು ಹಾಗೂ ಸ್ಪೋಟಕ ತಂದಿದ್ದ ವ್ಯಕ್ತಿಯನ್ನು ಪೊಲೀಸರು ಫಿಯಾಸ್ಟೋ ಕಾರು ಸಹಿತ ಶನಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತ ಆರೋಪಿ ಉಡುಪಿಯ ಹಾವಂಜೆಯ ರೋನಿ ಡಿಸೋಜಾ (32) ಎಂದು ತಿಳಿದು ಬಂದಿದೆ.

ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕ್ಯೂ ಆರ್ ಟಿ ಕರ್ತವ್ಯದಲ್ಲಿದ್ದ ಸಿಐಎಸ್‍ಎಫ್ ಸಿಬ್ಬಂದಿಗಳು ಕಾರಿನೊಳಗೆ ಇಣುಕಿ ನೋಡಿದಾಗ ಸಿಂಗಲ್ ಬ್ಯಾರಲ್‍ ನ ಎರಡು ನಾಡ ಬಂದೂಕುಗಳು ಮತ್ತು ಸ್ಫೊಟಕಗಳು, ಚಾಕುಗಳು, ಮತ್ತಿತರ ಅಪಾಯಕಾರಿ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next