Advertisement

ಮಂಗಳೂರು ಅಂ.ರಾ. ವಿಮಾನ ನಿಲ್ದಾಣ ಎಲ್‌ಇಡಿಮಯ

01:07 AM Sep 18, 2019 | mahesh |

ಬಜಪೆ: “ಉಳಿತಾಯ’ ಖುಷಿ ಕೊಡುವ ಪದ. ಖರ್ಚು ಕಡಿಮೆ ಮಾಡಿ ಹೆಚ್ಚು ಸೇವೆ ನೀಡುವ ಉಳಿತಾಯಕ್ಕೆ ಅಧಿಕ ಗೌರವವಿದೆ. ಅಂತಹ ಒಂದು ಮಾದರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ.

Advertisement

ವಿಮಾನ ನಿಲ್ದಾಣದ ಆಗಮನ, ನಿರ್ಗಮನ ದ್ವಾರದ ರಸ್ತೆಯಿಂದ ತೊಡಗಿ ಕಾರು ಪಾರ್ಕಿಂಗ್‌, ನಿರ್ಗಮನ ಮತ್ತು ಆಗಮನ ಹಾಲ್‌ ಎಲ್ಲೆಡೆ ಈಗಾಗಲೇ ಎಲ್‌ಇಡಿ ದೀಪವನ್ನು ಅಳವಡಿಸಲಾಗಿದೆ. ಇಲ್ಲಿರುವುದು ಶೇ. 99ರಷ್ಟು ದೀಪಗಳೇ. ಇದರಿಂದ ವಿದ್ಯುತ್‌ ವೆಚ್ಚ ಕಡಿಮೆಯಾಗಿದ್ದು, ಉಳಿತಾಯ ಸಾಧ್ಯವಾಗಿದೆ.

ಮೂರು ವರ್ಷಗಳಿಂದ ಹಂತಹಂತವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸ ಬರಲಾಗಿತ್ತು. ಈಗಾಗಲೇ ಇಂಥ ಸುಮಾರು 1,050 ದೀಪ ಹಾಕಿಕೊಳ್ಳಲಾಗಿದೆ.

ಮಾಸಿಕ 6 ಲ. ರೂ. ಉಳಿತಾಯ
ಎಲ್‌ಇಡಿ ಬಲ್ಬ್ಗಳ ಅಳವಡಿಕೆ ಯಿಂದ ವಿಮಾನ ನಿಲ್ದಾಣದ ವಿದ್ಯುತ್‌ ಬಿಲ್‌ನಲ್ಲಿ 6 ಲಕ್ಷ ರೂ.ಗಳಷ್ಟು ಉಳಿತಾಯವಾಗಿದೆ. ಎರಡು ವರ್ಷಗಳ ಹಿಂದೆ ತಿಂಗಳಿಗೆ 61 ಲಕ್ಷ ರೂ.ಗಳಷ್ಟು ವಿದ್ಯುತ್‌ ಬಿಲ್‌ ಬರುತ್ತಿತ್ತು. ಈಗ 55 ಲಕ್ಷ ರೂ. ಆಗುತ್ತಿದೆ. ಮೆಸ್ಕಾಂ ಯೂನಿಟ್‌ಗೆ ದರ ಜಾಸ್ತಿ ಮಾಡಿದರೂ ಈ ಬಿಲ್‌ನಲ್ಲಿ ಹಿಂದಿಗಿಂತ ಸುಮಾರು 6 ಲಕ್ಷ ರೂ. ಉಳಿತಾಯವಾಗುತ್ತಿದೆ. ಹಿಂದಿನ 250 ವಾಟ್ಸ್‌ ಬದಲು 110 ವಾಟ್ಸ್‌ನ ಬಲ್ಬ್ಗಳನ್ನು ಬಳಕೆ ಮಾಡಲಾಗಿದೆ.

ಹಳೆ ವಿಮಾನ ನಿಲ್ದಾಣದಲ್ಲಿಯೂ ಎಲ್‌ಇಡಿ ಅಳವಡಿಕೆ ಪ್ರಾರಂಭ ವಾಗಿದೆ. ಈಗಾಗಲೇ ಕಾರ್ಗೊ, ವಿಮಾನ ನಿಲ್ದಾಣ ಕಾಲೊನಿ, ಮುರನಗರದಿಂದ ಹಳೆ ವಿಮಾನ ನಿಲ್ದಾಣ ರಸ್ತೆ, ಪೊಲೀಸ್‌ ಠಾಣೆ ರಸ್ತೆಯ ಲಾಡರ್‌ ಇರುವಲ್ಲಿ ತನಕ ಅಳವಡಿಕೆ ಮಾಡಲಾಗಿದೆ. ಈ ಗುತ್ತಿಗೆಯನ್ನು ಕೇಂದ್ರ ಸರಕಾರ ಮಾರ್ಚ್‌ನಲ್ಲಿ ಒಂದು ಕಂಪೆನಿಗೆ ನೀಡಿದೆ.
ಈಗಾಗಲೇ 85 ಕಡೆಗಳಲ್ಲಿ ಎಲ್‌ಇಡಿ ದೀಪ ಅಳವಡಿಕೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next