Advertisement
ನಿಲ್ದಾಣದಲ್ಲಿ ಈಗಾಗಲೇ 5 ಅಗ್ನಿಶಾಮಕ ವಾಹನಗಳಿವೆ. ಸುಮಾರು 10 ಸಾವಿರ ಲೀ. ನೀರು ಸಾಗಿಸಬಲ್ಲ ವಾಹನಗಳಿವೆ. ಅಗ್ನಿ ಶಮನಕ್ಕೆ ಸಂಬಂಧಿಸಿ ದೇಶ-ವಿದೇಶಗಳಲ್ಲಿ ತರಬೇತಿ ಪಡೆದಿರುವ 39 ಪರಿಣತರ ತಂಡವಿದೆ. ಇದಕ್ಕೆ ಪೂರಕವಾಗಿ ಆಸ್ಟ್ರಿಯಾದಿಂದ ಹೊಸ ಯಂತ್ರ ವಾಹನವನ್ನು ಈಚೆಗೆ ತರಿಸಲಾಗಿತ್ತು. 40 ಸೆಕೆಂಡ್‌ನ ಒಳಗೆ ಗಂಟೆಗೆ 80 ಕಿ.ಮೀ. ವೇಗ ಪಡೆಯಬಲ್ಲ ಇದು ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಸಹಕಾರಿ.
ಘಟನಾ ಸ್ಥಳಕ್ಕೆ ಅತ್ಯಂತ ವೇಗವಾಗಿ ತೆರಳಬಲ್ಲ ಅತ್ಯಾಧುನಿಕ ವಾಹನವಿದು. 25 ಸೆಕೆಂಡ್ ಒಳಗೆ ತಾಸಿಗೆ 80 ಕಿ.ಮೀ. ವೇಗ ಪಡೆಯಬಲ್ಲುದು. ಏರ್‌ಪೋರ್ಟ್‌ನಲ್ಲಿ ಅಗ್ನಿಅವಘಡಗಳಾದರೆ ಅರೆಕ್ಷಣದಲ್ಲಿಯೇ ತಲುಪಲು ಸಾಧ್ಯ. ಸುಮಾರು 6 ಸಾವಿರ ಲೀ. ನೀರು ಮತ್ತು 800 ಲೀ.ನಷ್ಟು ಅಗ್ನಿ ಶಮನಕಾರಿ ನೊರೆಯನ್ನು ಇದು ಹೊಂದಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಮರದ ಕೊಂಬೆಯಂಥ ಅಡೆತಡೆಗಳನ್ನು ಕತ್ತರಿಸಿ ನಿವಾರಿಸಲು ಬೇಕಾದಂಥ ಆಧುನಿಕ ತಾಂತ್ರಿಕ ಸಲಕರಣೆಗಳು ಇದರಲ್ಲಿವೆ. ಕೆಮರಾ, ಹೈಮಾಸ್ಕ್ ಲ್ಯಾಂಪ್ ಇದರಲ್ಲಿದ್ದು, ಎಲ್ಲವೂ ಕಂಪ್ಯೂಟರೀಕೃತವಾಗಿ ಕೆಲಸ ಮಾಡುತ್ತವೆ. 5 ಮಂದಿ ಕುಳಿತುಕೊಳ್ಳಲು ಅವಕಾಶವಿದೆ.
Related Articles
ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನಗಳ “ಕ್ಷಿಪ್ರ ಕಾರ್ಯಾಚರಣೆ ವಾಹನ’ವನ್ನು ತರಿಸಲಾಗಿದೆ. ಏರ್‌ಪೋರ್ಟ್‌ನ ಅಗ್ನಿಶಾಮಕದಳ ಇದರಿಂದ ಮತ್ತಷ್ಟು ಬಲಯುತವಾಗಿ, ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಿದೆ.
– ವಿ.ವಿ. ರಾವ್ ನಿರ್ದೇಶಕರು, ಮಂಗಳೂರು ಅಂ. ವಿಮಾನ ನಿಲ್ದಾಣ
Advertisement