Advertisement

ಮಂಗಳೂರು ಏರ್ ಪೋರ್ಟ್: ಮಹಿಳೆಯ ಒಳ ಉಡುಪಿನಲ್ಲಿ 739 ಗ್ರಾಂ ಚಿನ್ನ!

03:35 PM Dec 16, 2021 | Team Udayavani |

ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಮಹಿಳಾ ಪ್ರಯಾಣಿಕರೊಬ್ಬರಿಂದ 739 ಗ್ರಾಂ ಚಿನ್ನವನ್ನು ಡಿ., ಗುರುವಾರ ವಶ ಪಡಿಸಿಕೊಂಡಿದ್ದಾರೆ.

Advertisement

ದುಬೈ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಕಾಸರಗೋಡು ಜಿಲ್ಲೆಯ ತಳಂಗರೆ ಮೂಲದ ಮಹಿಳೆಯ ಬಳಿ 24 ಕ್ಯಾರಟ್ ನ 36 ಲಕ್ಷದ 43 ಸಾವಿರದ 270 ರೂ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಚಿನ್ನದ ಪೇಸ್ಟ್ ಅನ್ನು ಬೂದು ಬಣ್ಣದ ಪೇಪರ್ ನಲ್ಲಿ ಮರೆಮಾಚಿ ಒಳ ಉಡುಪಿನಲ್ಲಿ ಇಟ್ಟು ಹೊಲಿದು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next