Advertisement
ವಿಶೇಷವೆಂದರೆ ಜಿಲ್ಲಾಡಳಿತದಿಂದಲೂ ಅಧಿಕೃತ ಶಿಫಾ ರಸು ಹೋಗಿಲ್ಲ. ವೀರರಾಣಿ ಅಬ್ಬಕ್ಕ, ಯು. ಶ್ರೀನಿ ವಾಸ ಮಲ್ಯ, ಕೋಟಿ ಚೆನ್ನಯ, ಬ್ರಹ್ಮಶ್ರೀ ನಾರಾ ಯಣ ಗುರು, ಕಮಲಾದೇವಿ ಚಟ್ಟೋಪಾಧ್ಯಾಯ ಮುಂತಾದಹೆಸರುಗಳನ್ನು ಸಂಘ ಟನೆಗಳು ಪ್ರಸ್ತಾವಿಸಿವೆ. 2020ರ ನವೆಂಬರ್‌ನಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪೆನಿ ವಹಿಸಿಕೊಂಡ ಬಳಿಕ ಅದಾನಿ ಏರ್‌ಪೋರ್ಟ್ ಎಂದು ಹೆಸರಿಸಲಾಗಿತ್ತು. ಜನರ ವಿರೋಧ ಬಂದ ಹಿನ್ನೆಲೆಯಲ್ಲಿ ಹಳೆಯ ಹೆಸರೇ ಉಳಿಯಿತು.
Related Articles
Advertisement
ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಅನೇಕರು ಪತ್ರಗಳನ್ನು ಬರೆದಿದ್ದರೂ ಪ್ರಸ್ತಾವದ ರೂಪದಲ್ಲಿ ಸರಕಾರಕ್ಕೆ ಹೋಗಿಲ್ಲ. 2014ರಲ್ಲಿ ಸಚಿವರಾಗಿದ್ದ ಯು. ಟಿ. ಖಾದರ್ ಕೂಡ ರಾಣಿ ಅಬ್ಬಕ್ಕನ ಹೆಸರು ಇಡುವುದಾಗಿ ಹೇಳಿದ್ದರು.
ಯಾವ ಕಾರಣಕ್ಕೆ ಹಿಂದಿನ ಹೆಸರು ಬದಲಿಸಬೇಕು ಹಾಗೂ ನಿರ್ದಿಷ್ಟ ಹೊಸ ಹೆಸರು ಇಡಬೇಕು ಎನ್ನುವುದನ್ನು ಆಸಕ್ತ ಪ್ರಾಯೋಜಕರು, ಸಂಘಟಕರು ಪತ್ರದ ಮೂಲಕ ವಿಮಾನ ನಿಲ್ದಾಣದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಅವರು ಅದನ್ನು ರಾಜ್ಯ ಸರಕಾರಕ್ಕೆ, ಅಲ್ಲಿಂದ ಶಿಫಾರಸು ರೂಪದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುವುದು. ಈ ಶಿಫಾರಸುಗಳನ್ನು ಸಚಿವಾಲಯ ಪರಿಶೀಲಿಸಿ ನಿರ್ಧರಿಸುತ್ತದೆ. ಕೆಲವೊಮ್ಮೆ ಕೇಂದ್ರ ಸರಕಾರವೇ ಸ್ವಯಂಪ್ರೇರಣೆಯಿಂದ ನಾಮಕರಣ ಮಾಡಲೂಬಹುದು. ಕೇಂದ್ರ ಸರಕಾರವು ಅಂಗೀಕರಿಸುವ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗುತ್ತದೆ.
ಹಲವು ಸಂಘ-ಸಂಸ್ಥೆ ಗಳಿಂದ ಮನವಿಗಳು ಬರುತ್ತಿವೆ. ಈವರೆಗೆ ಸಂಪುಟ ಸಭೆಯಲ್ಲಿ ನಿರ್ಣಯವಾಗಿಲ್ಲ, ಪ್ರಸ್ತಾವನೆಯನ್ನೂ ಕಳುಹಿಸಿಲ್ಲ. – ವಿ. ಸುನಿಲ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು