ಮಂಗಳೂರು: ಮಂಗಳೂರು ದಕ್ಷಿಣ ವಲಯ-1 ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ವ್ಯಸನ ಮಾಡುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಿದ್ದಾರೆ.
ಅನೀಶ್, ಅಭಿರಾಮ್ , ಮಹಮ್ಮದ್ ಮಾರ್ವನ್, ರಿಲ್ಲಾಶ್, ಹರ್ಷ, ಮಹಮ್ಮದ್ ಸನನ್ ಮತ್ತು ರಯ್ಯಾನ್ ಬಂಧಿತ ಆರೋಪಿಗಳು.
ಬಂಧಿಸಲ್ಪಟ್ಟ ಎಲ್ಲಾ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿದ ನೆತ್ತರು: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೀಮಾ ಸುವಾರೀಸ್ , ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಶಂಕರ್ ಕೆ . ಮತ್ತು ಸಿಬ್ಬಂದಿಗಳಾದ ಶ್ರೀ.ಸಂತೋಷ್ ಕುಮಾರ್ , ಶ್ರೀ ಸುನಿಲ್ ಶೇಟ್ ಬೈಂದೂರ್ , ಶ್ರೀ ಕುಮಾರ್ ಆರ್ . ನೀಲನಾಯ್ಕ ಮತ್ತು ಶ್ರೀ ಸಂದೀಪ್ ಕುಮಾರ್ ಭಾಗಿಯಾಗಿದ್ದರು.