Advertisement

“ಮಂಗಳವಾರ ರಜಾದಿನ’ಎಂದ ಹೊಸಬರು

09:43 AM Nov 06, 2019 | Lakshmi GovindaRaju |

ಭಿನ್ನ-ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಸೆಟ್ಟೇರುತ್ತಲೇ ಇದೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ಮಂಗಳವಾರ ರಜಾದಿನ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿದ್ದು, ಈಗ ಚಿತ್ರದ ಮೊದಲ ಹಾಡು ಬಿಡುಗಡೆಗೆ ರೆಡಿಯಾಗಿದೆ. ನವೆಂಬರ್‌ 8ರಂದು ಚಿತ್ರದ ಹಾಡು ಲಹರಿ ಮ್ಯೂಸಿಕ್‌ ಮೂಲಕ ಬಿಡುಗಡೆಯಾಗಲಿದೆ.

Advertisement

ಚಿತ್ರದಲ್ಲಿ ಚಂದನ್‌ ಆಚಾರ್‌, ಲಾಸ್ಯಾ ನಾಗರಾಜ್‌, ನಂದನ್‌ ರಾಜ್‌ ಈ ಹಾಡಿನ ಚಿತ್ರೀಕರಣದಲ್ಲಿದ್ದಾರೆ. ಭಿನ್ನ ಹಾಸ್ಯಭರಿತ ಈ ಗೀತೆಯನ್ನು ಯುನ್‌ ಅವರು ಬರೆದು, ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಶೇಷವಾದ ಕಾರೊಂದನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಖ್ಯಾತ ಗಾಯಕ ನವೀನ್‌ ಸಜ್ಜು ಈ ಹಾಡನ್ನು ನೂತನ ಶೈಲಿಯಲ್ಲಿ ಹಾಡಿದ್ದಾರೆ.

ಯುವಿನ್‌ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಥಮ ಪ್ರತಿ ಸಹ ಸಿದ್ಧವಾಗಿದೆ. ಕ್ಷೌರಿಕನ ಸುತ್ತ ಹೆಣೆಯಲಾದ ಈ ಚಿತ್ರ ಹಾಸ್ಯಭರಿತ, ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ಕ್ಷೌರಿಕನ ಪಾತ್ರದಲ್ಲಿ  ಚಂದನ್‌ ಆಚಾರ್‌ ಅಭಿನಯಿಸಿದ್ದಾರೆ.

ಲಾಸ್ಯ ನಾಗರಾಜ್‌ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಹಂಗೀರ್‌, ರಜನಿಕಾಂತ್‌, ಗೋಪಾಲಕೃಷ್ಣ ದೇಶಪಾಂಡೆ, ನಂದನ್‌ ರಾಜ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರಜೋತ್‌ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್‌ ಭಟ್‌,ನಾಗೇಂದ್ರ ಪ್ರಸಾದ್‌, ಯುವಿನ್‌ ಹಾಡುಗಳನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next