ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೋಮವಾರ ಆರಂಭಗೊಂಡಿದೆ. ಭಕ್ತರಿಂದ ಸಂಗ್ರಹವಾದ 2 ಕೆಜಿಯ ಚಿನ್ನಾಭರಣಗಳ ಸ್ವರ್ಣ ಪ್ರಭಾವಳಿ ಹಾಗೂ ಸ್ವರ್ಣ ಪಾದುಕೆ (1.25 ಕೋ. ರೂ. ವೆಚ್ಚ) ಗಳನ್ನು ಮಂಗಳಾಂಬೆಗೆ ಸಮರ್ಪಿಸಲಾಯಿತು.
ದೇವಸ್ಥಾನದ ಮುಖಮಂಟಪ ಹಾಗೂ ನಾಗದೇವರಿಗೆ ಬೆಳ್ಳಿಯ ಹೊದಿಕೆಯನ್ನು ಅಶೋಕನ್ ಟಿ.ಎ. ನೀಡಿದರು. ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಜಯಾನಂದ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಮೇಯರ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಎಡಿಸಿ ಕೃಷ್ಣಮೂರ್ತಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ನಿತಿನ್ ಕುಮಾರ್, ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಸಿ. ನಾಯ್ಕ, ಪುಷ್ಪ ಕನ್ನಡಿ ಹಾಗೂ ದೇವರ ಪಾದುಕೆ ತಯಾರು ಮಾಡಿದ ಕೆನರಾ ಜ್ಯುವೆಲರ್ಸ್‌ನ ಮಾಲಕ ಧನಂಜಯ್ ಪಾಲ್ಕೆ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಪ್ರಸ್ತಾವನೆಗೈದರು. ಕ್ಷೇತ್ರದ ಮೊಕ್ತೇಸರ ರಮಾನಾಥ ಹೆಗ್ಡೆ ಸ್ವಾಗತಿಸಿದರು. ಟ್ರಸ್ಟಿಗಳಾದ ರಾಮ ನಾಯ್ಕ ಕೋಟೆಕಾರ್, ಪ್ರೇಮಲತಾ ಎಸ್. ಕುಮಾರ್, ಆನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯ, ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ, ಪರ್ಯಾಯ ಪ್ರಧಾನ ಅರ್ಚಕ ಎಂ. ರಾಮಚಂದ್ರ ಐತಾಳ, ಶ್ರೀನಿವಾಸ್ ಐತಾಳ ಉಪಸ್ಥಿತರಿದ್ದರು. ಮಲ್ಲಿಕಾ ಕಲಾವೃಂದದ ಅಧ್ಯಕ್ಷ ಸುಧಾಕರ ಪೇಜಾವರ ವಂದಿಸಿದರು. ಕೆ. ವಿನಯಾನಂದ ಕಾನಡ್ಕ ನಿರ್ವಹಿಸಿದರು.