Advertisement

ನವರಾತ್ರಿ ವಿಶೇಷ: ಮಹತೋಭಾರ ಮಂಗಳಾದೇವಿ ದೇವಸ್ಥಾನ

06:50 PM Sep 28, 2019 | Sriram |

ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಸೆ.29ರಿಂದ ಅ.9ರ ವರೆಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ಜರಗಲಿದೆ.

Advertisement

ಸೆ.29ರಂದು ಬೆಳಗ್ಗೆ 9ಗಂಟೆಗೆ ಗಣಪತಿ ಪ್ರಾರ್ಥನೆ ಮತ್ತು ನವರಾತ್ರಿ ಉತ್ಸವದ ಉದ್ಘಾಟನೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಅ.2ರಂದು ಶ್ರೀ ಲಲಿತಾ ಪಂಚಮಿ, ಅ.4ರಂದು ಮೂಲ ನಕ್ಷತ್ರ, ರಾತ್ರಿ ಉತ್ಸವಾರಂಭ, ಅ.7ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣ ರಥೋತ್ಸವ, ಅ.8ರಂದು ವಿಜಯ ದಶಮಿ (ವಿದ್ಯಾರಂಭ, ತುಲಾಭಾರ), ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ, ಅ.9ರಂದು ಅವಭೃತ ಮಂಗಳ ಸ್ನಾನ, ಅ.10ರಂದು ಸಂಪ್ರೋಕ್ಷಣೆ, ಸಂಜೆ 6.30ಕ್ಕೆ ಸಾರ್ವಜನಿಕ ಶೀÅ ಸತ್ಯನಾರಾಯಣ ಪೂಜೆ ಜರಗಲಿದೆ. ಪ್ರತಿ ದಿನ ಸಂಜೆ ಭಜನೆ, ನೃತ್ಯ ವೈಭವ, ಯಕ್ಷಗಾನ ಬಯಲಾಟ, ಭರತನಾಟ್ಯ ಕಾರ್ಯಕ್ರಮ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next