ಮಹಾನಗರ: ಕ್ರೀಡಾ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ನಗ ರದ ಬಹುಮುಖ್ಯವಾದ ಮಂಗಳಾ ಕ್ರೀಡಾಂಗಣದ ಸುತ್ತಲೂ ಪೂರ್ಣ ಭಾಗ ದಲ್ಲಿ ಸುಸಜ್ಜಿತ ಗ್ಯಾಲರಿ ನಿರ್ಮಾ ಣದ ಮಹತ್ವದ ಯೋಜನೆ ಸಾಕಾರವಾಗುವ ನಿರೀಕ್ಷೆಯಿದೆ. ಸದ್ಯ ಸ್ಮಾರ್ಟ್‌ಸಿಟಿ ಯೋಜನೆಯಡಿ ಕ್ರೀಡಾಂಗಣದ ಆಗಮನ ಗೇಟ್ ವ್ಯಾಪ್ತಿಯ ಕೆಲವು ಪಾರ್ಶ್ವದಲ್ಲಿ ಗ್ಯಾಲರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮುಂದೆ ಇಂತಹ ಗ್ಯಾಲರಿಯನ್ನು ಮೈದಾನ ಪೂರ್ಣ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.
ಮಂಗಳಾ ಕ್ರೀಡಾಂಗಣದ ಸುತ್ತಲೂ ಗ್ಯಾಲರಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ವ್ಯವಸ್ಥೆಯ ಕಾರ್ಯ ಕೈಗೆತ್ತಿ ಕೊಳ್ಳಲು ಸುಮಾರು 120 ಕೋಟಿ ರೂ.ನಷ್ಟು ಖರ್ಚು ತಗಲಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ಅನುದಾನ ಹೊಂದಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ತಯಾರು ಮಾಡಿ ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸ ಲಾಗಿದೆ. ಕೇಂದ್ರ ಸರಕಾರದಿಂದ ಕ್ರೀಡಾ ಕ್ಷೇತ್ರದ ಕೆಲವೊಂದು ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದು, ಖೇಲೋ ಇಂಡಿಯಾ ಸೇರಿದಂತೆ ಇತರೇ ಯೋಜನೆಯ ಮೂಲಕ ಹಣ ಹೊಂದಿಕೆಯ ನಿರೀಕ್ಷೆ ಮಾಡಲಾಗಿದೆ.
ಈ ಯೋಜನೆಯ ಪ್ರಕಾರ ಕ್ರೀಡಾಂಗಣದ ಸುತ್ತಲೂ ಇರುವ ಮಣ್ಣಿನ ಫೆವಿಲಿಯನ್ ಅನ್ನು ತೆರವು ಮಾಡಲಾಗುತ್ತದೆ. ಬಳಿಕ ಅಲ್ಲಿ ಕಾಂಕ್ರೀಟ್ ಫೆವಿಲಿಯನ್ ಬ್ಲಾಕ್ ಅನ್ನು ನಿರ್ಮಾಣ ಮಾಡಲಾಗುತ್ತದೆ. ಟೆನ್ಸಿಲ್ ಛಾವಣಿ ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈಜುಕೊಳ-ಲೇಡಿಹಿಲ್ ಭಾಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಅಂಗಡಿ ಕೋಣೆಗಳ ನಿರ್ಮಾಣ ಮಾಡಿ ಆ ಬಾಡಿಗೆ ಹಣದಿಂದ ಕ್ರೀಡಾಂಗಣದ ನಿರ್ವಹಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕೆ ತಕ್ಕಂತೆ ಡಿಪಿಆರ್ ತಯಾರಾಗಲಿದ್ದು, ಹಿರಿಯ ಕ್ರೀಡಾಪಟುಗಳ ಸಲಹೆಯ ಮೇರೆಗೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ.
ಮೊದಲ ಹಂತ ಶೇ.95 ಪೂರ್ಣ
ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಮಂಗಳಾ ಕ್ರೀಡಾಂಗಣ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಸುಮಾರು 80 ಮೀ. ಉದ್ದಕ್ಕೆ ಪೆವಿಲಿಯನ್, ಎರಡು ಮಹಡಿಗಳ ಕಟ್ಟಡ, ಟೆನ್ಸಿಲ್ ಛಾವಣಿ, ಸುಮಾರು 600 ಮಂದಿ ವೀಕ್ಷಕರಿಗೆ ಆಸನ ವ್ಯವಸ್ಥೆ, ಶೌಚಾಲಯ, ಕ್ರೀಡಾಪಟುಗಳ ಡ್ರೆಸ್ ಚೆಂಜಿಂಗ್ ರೂಂ ಮತ್ತು ಟಾಯ್ಲೆಟ್‌ಗಳು, ಜಿಮ್ ಕೊಠಡಿ, ಜಿಮ್ ಉಪಕರಣ, ಉಗ್ರಾಣ ಕೊಠಡಿ, ಕಚೇರಿ ಕೊಠಡಿ, ಅಗ್ನಿಶಾಮಕ ವ್ಯವಸ್ಥೆ, ಮೋಟಾರೈಸ್ಡ್ ರೋಲಿಂಗ್ ಷಟರ್ ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದೆ.
ತರಬೇತಿ ಕೇಂದ್ರ
ಜಿಲ್ಲಾ ಮಟ್ಟದಲ್ಲಿ ಖೇಲೋ ಇಂಡಿಯಾ ತರಬೇತಿ ಕೇಂದ್ರವು ಮಂಗಳಾ ಕ್ರೀಡಾಂಗಣದಲ್ಲಿ ಸ್ಥಾಪನೆಯಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ಆ್ಯತ್ಲೆಟಿಕ್ ಕ್ರೀಡೆಗೆ ತರಬೇತಿ ನೀಡಲು ಆದೇಶಿಸಲಾಗಿದೆ. ಅದರಂತೆ ಮಂಗಳಾ ಕ್ರೀಡಾಂಗಣದಲ್ಲಿ ಉತ್ತಮ ಟ್ರ್ಯಾಕ್ ಕೂಡ ಇದ್ದು ಇದೀಗ ಸ್ಮಾರ್ಟ್‌ಸಿಟಿಯಿಂದ ಕ್ರೀಡಾಂಗಣದ ಗ್ಯಾಲರಿ ಸೇರಿದಂತೆ, ಮೂಲ ಸೌಕರ್ಯ ಅಭಿವೃದ್ಧಿಯಾಗುತ್ತಿದೆ.
ಕೇಂದ್ರಕ್ಕೆ ಪ್ರಸ್ತಾವನೆ
ನಗರದ ಮಂಗಳಾ ಕ್ರೀಡಾಂಗಣ ಮೊದಲನೇ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮುಂದುವರಿದ ಕಾಮಗಾರಿಗೆ ಅನುದಾನ ಹೊಂದಿಸುವ ನಿಟ್ಟಿನಲ್ಲಿ ಹೊಸ ವಿಸ್ತೃತ ವರದಿ ರಚಿಸಿ, ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಕೇಂದ್ರ ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಾಗುವುದು.
–ವೇದವ್ಯಾಸ ಕಾಮತ್,ಶಾಸಕರು