ಮಂಡ್ಯ: ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಅಗತ್ಯವಾಗಿದ್ದು, ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗು ತ್ತಿರುವುದರಿಂದ ಜಿಲ್ಲೆಗೆ ಅತಿ ಹೆಚ್ಚು ಕೈಗಾರಿ ಕೋದ್ಯಮಗಳ ಸ್ಥಾಪನೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಆಗುತ್ತಿರುವುದರಿಂದ ಕೈಗಾರಿ ಕೋದ್ಯಮಕ್ಕೆ ಉತ್ತಮವಾಗಿದೆ.
ಕೃಷಿಯೇತರ ಭೂಮಿಯಲ್ಲಿ ಕೈಗಾರಿಕೆಗಳು ಹೆಚ್ಚಾದಂತೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯ ಪ್ರತಿಭಾವಂತ ಯುವಕ- ಯುವಕರಿಗೆ ಉದ್ಯೋಗಗಳು ಸಿಗಲಿದ್ದು, ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದೆ.
ಬೆಲ್ಲ ಉದ್ಯಮಕ್ಕೆ ಆಧುನೀಕರಣ ಸ್ಪರ್ಶ ಅಗತ್ಯ: ಮಂಡ್ಯ ಜಿಲ್ಲೆ ಕೈಗಾರಿಕೆಗಳಿಲ್ಲದೆ, ಹಳ್ಳಿಯಂತಾಗಿದೆ. ಪ್ರಸ್ತುತ ಆತ್ಮನಿರ್ಭರ್‌ಗೆ ಮಂಡ್ಯ ಬೆಲ್ಲ ಆಯ್ಕೆಯಾಗಿ ರುವುದರಿಂದ ಉದ್ಯಮವನ್ನಾಗಿ ಮಾಡಬಹುದಾಗಿದೆ. ಆಧುನಿಕ ತಂತ್ರಜಾnನ ಬಳಕೆಯಿಂದ ಬೆಲ್ಲ ಉದ್ಯಮವನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಪ್ರತಿಯೊಂದು ಗ್ರಾಮದಲ್ಲೂ ಆಲೆಮನೆಗಳು ತಲೆ ಎತ್ತಲಿದ್ದು, ಕೈಗಾರಿಕೆಯಂತೆ ಉದ್ಯೋಗಗಳು ಹೆಚ್ಚಲಿದೆ. ಅಲ್ಲದೆ, ಗುಣಮಟ್ಟದ ಬೆಲ್ಲಕ್ಕೆ ಅಂತಾ ರಾಷ್ಟ್ರೀಯ ಮಾನ್ಯತೆ ಸಿಗಲಿದ್ದು, ರಫ್ತು ಹೆಚ್ಚಾಗಲಿದೆ.
ಸ್ಮಾರ್ಟ್ ಸಿಟಿಗೆ ಮಂಡ್ಯ: ಮಂಡ್ಯ ನಗರವನ್ನು ದೇಶದ ಸ್ಮಾರ್ಟ್ ಸಿಟಿಗಳ ಪಟ್ಟಿಗೆ ಸೇರಿಸುವ ಮೂಲಕ ಅಭಿವೃದ್ಧಿಪಡಿಸಲು ಅನುದಾನ ಘೋಷಿಸಬೇಕಾಗಿದೆ. ಮಂಡ್ಯ ನಗರವು ಹಳ್ಳಿಯಂತಾಗಿದ್ದು, ಸ್ವತ್ಛತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಈಗಾಗಲೇ 125 ಕೋಟಿ ರೂ. ವೆಚ್ಚದಲ್ಲಿ 24 ಗಂಟೆಗಳ ಕಾಲ ನಿರಂತರ ನೀರು ಪೂರೈಸಲು ಅಮೃತ್ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಇದರ ಜತೆಗೆ ಸ್ಮಾರ್ಟ್ ಸಿಟಿ ಮಾಡಲು ಮುಂದಾದರೆ ಮಂಡ್ಯ ನಗರಬೃಹತ್ತಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರ್ಪಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಘೋಷಣೆ ಮಾಡುವ ನಿರೀಕ್ಷೆ ಇದೆ.
ಕಬ್ಬಿಗೆ ಉತ್ತೇಜನ ಅಗತ್ಯ: ಜಿಲ್ಲೆಯು ಕೃಷಿ ಪ್ರದಾನವಾಗಿದ್ದು, ಅತಿ ಹೆಚ್ಚು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಭತ್ತ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಉತ್ತೇಜನ ನೀಡುವನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ರೈತರನ್ನು ಕೃಷಿಗೆ ಪೋ›ತ್ಸಾಹಿಸಬಹುದಾಗಿದೆ. ಈಗಾಗಲೇ ಭತ್ತ, ರಾಗಿಗೆ ಬೆಂಬಲ ಬೆಲೆಯಡಿ ಖರೀದಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬೇಕಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಹೆಚ್ಚಿಸಬೇಕಾಗಿದೆ. ಒಂದು ಬೆಳೆ ಬೆಳೆಯಲು ಶ್ರಮ, ಖರ್ಚು ಹೆಚ್ಚಿದೆ. ಅದರ ಆಧಾರದ ಮೇಲೆ ಪೋ›ತ್ಸಾಹ ಧನ ನಿಗದಿಯಾಗಬೇಕು.
ಎಂಎಸ್‌ಪಿ ನಿಗದಿ ಮಾಡಬೇಕು: ರೈತರು ಬೆಳೆದಿರುವ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಮಾಡಬೇಕು. ಅದನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೃಷಿ ಮಸೂದೆಗಳ ಜಾರಿಯಿಂದ ರೈತರು ಕೃಷಿಯಿಂದ ವಿಮುಖರಾಗುವ ಭೀತಿ ಕಾಡುತ್ತಿದೆ. ಇದನ್ನು ತೆಗೆದು ಹಾಕಬೇಕು ಎಂದು ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಒತ್ತಾಯಿಸುತ್ತಾರೆ.
ಇದನ್ನೂ ಓದಿ:ಕಸದ ಕೊಂಪೆಯಂತಾದ ವೇಮಗಲ್ ಪಟ್ಟಣ
ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ: ಈಗಾಗಲೇ ಅಗತ್ಯ ವಸ್ತುಗಳ ಗಗನಕ್ಕೇರಿರುವುದರಿಂದ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚುತ್ತಿದೆ. ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಮುಂದುವರಿಸಬೇಕು. ಜನರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚುವಂತೆ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಜನ ಸಾಮಾನ್ಯರ ಕೈಗೆಟುಕುವಂತೆ ಮಾಡಬೇಕು. ಆಹಾರ ಭದ್ರತೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಪೋ›ತ್ಸಾಹ ನೀಡಬೇಕು. ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ.