ಮಾ.8 ವಿಶ್ವ ಮಹಿಳಾ ದಿನಾಚರಣೆ. ಈ ದಿನ ಎಲ್ಲೆಡೆ ಮಹಿಳೆಯರ ಸಾಧನೆ ಕುರಿತು ಸ್ಮರಿಸಲಾಗುತ್ತದೆ. ಜಿಲ್ಲೆಯಲ್ಲಿಯೂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಸರ್ಕಾರಿ-ಖಾಸಗಿ ಹುದ್ದೆ ಹಾಗೂ ಹೋರಾಟಗಳಲ್ಲೂ ಎಲೆಮರೆಯ ಕಾಯಿಯಂತೆ ದುಡಿಯುತ್ತಿದ್ದಾರೆ. ಈ ಕುರಿತು”ಉದಯವಾಣಿ’ಯಿಂದ ಬೆಳಕು ಚೆಲ್ಲುವ ಪ್ರಯತ್ನ
ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆ ಸಂದರ್ಭಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳೇ ಉನ್ನತ ಹುದ್ದೆಯಲ್ಲಿದ್ದು, ಆಡಳಿತ ನಡೆಸುತ್ತಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ.
ಮಹಿಳಾ ಅಧಿಕಾರಿಗಳು: ಜಿಲ್ಲಾ ಧಿಕಾರಿ ಎಸ್. ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಮಂಡ್ಯ ಉಪವಿಭಾಗಾಧಿಕಾರಿ ನೇಹಾಜೈನ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಂ.ಮಂಜುಳಾದೇವಿ, ಆಹಾರ ಇಲಾಖೆಯ ಉಪನಿರ್ದೇಶಕಿ ಕುಮುದಾ ಶರತ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಪುಷ್ಪಾ, ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ, ಶಿಕ್ಷಣ ಇಲಾಖೆಯ ಮಂಡ್ಯ ಉತ್ತರ ವಲಯ ಚಂದ್ರಕಾಂತ, ಪಾಂಡವಪುರ, ಶ್ರೀರಂಗಪಟ್ಟಣದ ಬಿಇಒಗಳು, ಮದ್ದೂರು, ನಾಗಮಂಗಲ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿಯರು, ಮಳವಳ್ಳಿಯ ಅಬಕಾರಿ ನಿರೀಕ್ಷಕಿ ಸೇರಿದಂತೆ ವಿವಿಧ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ.
ಮಹಿಳಾ ಜನಪ್ರತಿನಿ ಧಿಗಳು: ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆಯಾಗಿ ಸುಮಲತಾ ಅಂಬರೀಷ್, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ನಗರಸಭೆ ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ತಾಪಂ ಅಧ್ಯಕ್ಷೆ ಶಿವಕುಮಾರಿ, ಮದ್ದೂರು ಪುರಸಭೆ ಉಪಾಧ್ಯಕ್ಷೆ ಸುಮಿತ್ರ, ಮಳವಳ್ಳಿ ಪುರಸಭೆ ಅಧ್ಯಕ್ಷೆ ರಾಧಾನಾಗರಾಜು, ಮದ್ದೂರು ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಶ್ರೀರಂಗಪಟ್ಟಣ ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ನಂದಾಮಣಿ, ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷೆ ನಿರ್ಮಲಾ, ನಾಗಮಂಗಲ ಪುರಸಭೆ ಅಧ್ಯಕ್ಷೆ ಆಶಾ ಸೇರಿದಂತೆ ವಿವಿಧ ಗ್ರಾಪಂ ಆಡಳಿತ ಮಂಡಳಿಗಳಲ್ಲೂ ಮಹಿಳಾ ಜನಪ್ರತಿನಿಧಿಗಳು ಅಧಿಕಾರ ಹಿಡಿದಿದ್ದಾರೆ.
ಹೋರಾಟದಲ್ಲೂ ಮುಂಚೂಣಿ :
ರೈತ, ದಲಿತ, ಕಾರ್ಮಿಕ ಹೋರಾಟಗಳಲ್ಲೂ ಜಿಲ್ಲೆಯ ಮಹಿಳಾ ನಾಯಕಿಯರು ಮುಂಚೂಣಿಯಲ್ಲಿದ್ದಾರೆ. ರೈತ ನಾಯಕಿಯರಾಗಿ ಸುನಂದಜಯರಾಂ, ನಂದಿನಿ ಜಯರಾಂ, ಸಿಐಟಿಯುನ ಸಿ.ಕುಮಾರಿ, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಮಹದೇವಮ್ಮ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ಮಹಿಳಾ ಮುನ್ನಡೆಯ ಮಲ್ಲಿಗೆ, ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಕಮಲ ಸೇರಿದಂತೆ ಸಾಕಷ್ಟು ಮಂದಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
-ಎಚ್.ಶಿವರಾಜು