ಮಂಡ್ಯ: ಮಂಡ್ಯ ವಿವಿಗೆ ಶೀಘ್ರವೇ ಹೊಸ ಕುಲಪತಿ ನೇಮಕ ಮಾಡುವ ಸಿದ್ಧತೆಗಳು ಆರಂಭವಾಗಿವೆ ಎಂದು ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು. ಶುಕ್ರವಾರ ಮಂಡ್ಯ ವಿವಿ ಕಾಲೇಜಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ವಿವಿಯ ಸ್ಥಾನಮಾನಗಳಿಗೆ ಕೆಲವು ಕಾನೂನು ತೊಡಕುಗಳಿದ್ದವು.
ಅವೆಲ್ಲವನ್ನೂ ಈಗ ಪರಿಹರಿಸಲಾಗಿದೆ. ಕುಲಪತಿಯನ್ನು ನೀಡುವ ಮೂಲಕ ಮಂಡ್ಯ ವಿವಿಗೆ ಹೊಸ ರೂಪ ನೀಡಲಾಗುವುದು. ಮಂಡ್ಯ ವಿವಿಗೆ ಕುಲಪತಿಗಳನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಪಾಲರ ಸುಗ್ರಿವಾಜ್ಞೆ ಹೊರಬೀಳುತ್ತಿದ್ದಂತೆ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶೈಕ್ಷಣಿಕ ಕ್ರಾಂತಿ: ಕೆ.ವಿ.ಶಂಕರಗೌಡರು ಶಿಕ್ಷ ಣದ ಕ್ರಾಂತಿಯನ್ನು ಮಾಡಿದ್ದಾರೆ. ನಾವು ಸಹ ಅದೇ ದಿಕ್ಕಿನಲ್ಲಿ ಮಂಡ್ಯ ವಿವಿಯಲ್ಲಿ ಶಿಕ್ಷಣ ಕ್ರಾಂತಿ ಮಾಡಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಗುಣಮಟ್ಟದ ಶಿಕ್ಷಣ ಸುಧಾರಣೆಗೂ ಕೆಲವು ಕ್ರಮ ಕೈಗೊಳ್ಳಲಾಗು ವುದು. ಪ್ರತಿ ವ್ಯಕ್ತಿಗೆ ಬದುಕು ಮತ್ತು ಜ್ಞಾನ ಬಹಳ ಮುಖ್ಯ. ಎರಡನ್ನು ಸಹ ಶೈಕ್ಷಣಿಕ ಕ್ರಾಂತಿಯಲ್ಲಿ ತುಂಬುವ ಇರಾದೆ ಹೊಂದಿ ದ್ದೇವೆ ಎಂದು ಹೇಳಿದರು.
ಫಲಿತಾಂಶ ನೀಡಲು ಸಿದ್ಧತೆ: ಮಂಡ್ಯ ವಿವಿಯಲ್ಲಿ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಕಾನೂನು ತೊಡಕುಗಳು ಇದ್ದವು. ಅವು ಗಳನ್ನು ಈಗ ಸರಿಪಡಿಸಲು ಅವಕಾಶ ಸಿಕ್ಕಿದೆ. ಮುಂದಿನ ಒಂದು ವಾರದಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ ಫಲಿತಾಂಶ ನೀಡಲು ಸಿದ್ಧತೆ ಮಾಡಲಾಗುವು ದು. ಅಲ್ಲದೇ ಬೋಧಕ ಮತ್ತು ಬೋಧ ಕೇತರ 70 ಮಂದಿ ಸಿಬ್ಬಂದಿಗೆ ಸಂಬಳದ ಸಮಸ್ಯೆಯಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ಸರಿ ಇರುವ ಎಲ್ಲಾ ಸಿಬ್ಬಂದಿಗಳಿಗೆ ಸಂಬಳ ನೀಡುವಂತೆ ಸೂಚಿಸಲಾಗಿದೆ ಎಂದರು.
ಕೌಶಲ್ಯ ಅಭಿವೃದ್ಧಿಗೆ ಆದ್ಯತೆ: ಪ್ರತಿಯೊಬ್ಬ ವಿದ್ಯಾರ್ಥಿ ಕೇವಲ ಪದವಿ ನೀಡಿದರೂ ಸಾಲದು. ಅತನಿಗೆ ಕೌಶಲ್ಯದ ಕೊರತೆ ಇರುತ್ತ ದೆ. ಈ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲಾ ಕ್ಷೇತ್ರದಲ್ಲಿ ಒಬ್ಬ ವಿದ್ಯಾರ್ಥಿ ಪ್ರಗತಿದಾಯಕನಾಗುವಂತೆ ಶ್ರವಿು ಸಲಾಗುವುದು. ಮಂಡ್ಯ ವಿವಿಯಲ್ಲಿ 4 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಷ್ಟು ಜನ ವಿದ್ಯಾರ್ಥಿಗಳಿಗೆ ಸೂಕ್ತ ಗುಣಮಟ್ಟದ ಶಿಕ್ಷಣ ದೊರೆತರೆ ಮಂಡ್ಯದ ಶಿಕ್ಷಣದ ಕ್ರಾಂತಿ ದಿಕ್ಕು ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ವಿವಿಗೆ ಸೇರಿದ 31 ಎಕರೆ ಜಾಗದಲ್ಲಿ 6 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕಾಲೇಜಿನ ವ್ಯಾಪ್ತಿಯಲ್ಲಿ ವಿದ್ಯುತ್ ಟೆನ್ಶನ್ ವೈರ್ ಹಾದು ಹೋಗಿದೆ. ಅವೆಲ್ಲವುಗಳನ್ನು ತೆರವುಗೊಳಿಸಲಾಗುವುದು. ಒತ್ತುವರಿದಾರರನ್ನು ಕಾನೂ ನಿನ ಪ್ರಕಾರ ತೆರವು ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ ಹೇಳಿದರು.