Advertisement
ಅಂಗಡಿಯೇನೋ ತೆರೆದಿರುತ್ತದೆ. ಆದರೆ, ಸರ್ವರ್ ಮಾತ್ರ ಇರುವುದಿಲ್ಲ. ಪಡಿತರದಾರರು ಹೆಬ್ಬೆಟ್ಟು (ಥಂಬ್ ಇಂಪ್ರಶನ್) ಕೊಟ್ಟರಷ್ಟೇ ಪಡಿತರ ಆಹಾರ ಧಾನ್ಯ ವಿತರಣೆ ಕೊಡಲು ಸಾಧ್ಯ. ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಂದ ಹೆಬ್ಬೆಟ್ಟು ತೆಗೆದು ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಡಿತರ ಅಂಗಡಿ ಮಾಲೀಕರು, ಪಡಿತರದಾರರು ತ್ರಿಶಂಕು ಪರಿಸ್ಥಿತಿ ಎದುರಿಸು ವಂತಾಗಿದೆ. ಪಡಿತರ ಪಡೆಯಲು ಚೀಲ ಹಿಡಿದು ಬರುವ ಕಾರ್ಡ್ ದಾರರು ದಿನವಿಡೀ ಕಾದರೂ ಪಡಿತರ ಪದಾರ್ಥಗಳು ಸಿಗುತ್ತಿಲ್ಲ.ಕೂಲಿಕಾರರ ಪರಿಸ್ಥಿತಿ ಇನ್ನಷ್ಟು ಶೋಚನೀಯ ವಾಗಿದೆ. ಪಡಿತರ ಕ್ಕಾಗಿ ಕಾದು ಕೂರುವ ಅವರು ಇತ್ತ ಪಡಿತರವೂ ಇಲ್ಲ, ಮತ್ತೂಂದೆಡೆ ಕೂಲಿಯೂ ಸಿಗದೆ ಒ¨ªಾಡುವಂತಾಗಿದೆ. ತನ್ಮಧ್ಯೆ ಬೆಳಗ್ಗೆಯಿಂದ ಕಂಪ್ಯೂಟರ್ ಎದುರು ಕುಳಿತರೂ “ದಿಸ್ ಸೈಟ್ ಕಾಂಟ್ ಬೀ ರೀಚ್x’
ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೆಜ್ ಓದಿ ಓದಿ ಸುಸ್ತಾಗಿದೆ ಎನ್ನುತ್ತಾರೆ ಪಡಿತರ ವಿತರಕರು. ಇದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸರ್ವರ್ ಅವಾಂತರದ ವಾಸ್ತವದ ಸ್ಥಿತಿ. ಕಳೆದ 15-20 ದಿನಗಳಿಂದ ಸರ್ವರ್ ನರ್ವಸ್ ಆಗಿದ್ದು, ಫಲಾನುಭವಿಗಳು ಪಡಿತರ ಅಂಗಡಿ ಗಳ ಮುಂದೆ ನಿಂತು ನಿಂತು ಸೋತು “ನಾಳೆ ಬಾ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.