Advertisement

ಸಮಸ್ಯೆಗಳ ತವರು ಕೆ.ಆರ್‌. ಪೇಟೆ

09:03 PM Aug 23, 2021 | Team Udayavani |

ಕೆ.ಆರ್‌.ಪೇಟೆ: ಪುರಸಭಾ ಆಡಳಿತ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು, ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿದ್ದು,ಸಾಂಕ್ರಮಿಕ ರೋಗ ಭೀತಿ ಮೂಡಿಸಿದೆ.

Advertisement

ಮಂಡ್ಯ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಮೈಸೂರುಮಹಾರಾಜರ ಹೆಸರಿನಲ್ಲಿರುವ ಕೃಷ್ಣರಾಜಪೇಟೆ ಪಟ್ಟಣ ಅಭಿವೃದ್ಧಿಯಲ್ಲಿಹಿಂದುಳಿದಿದ್ದು, ಪಟ್ಟಣದಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿಪುರಸಭೆ ಸಂಪೂರ್ಣ ವಿಫ‌ಲವಾಗಿದ್ದು, ಇದಕ್ಕೆ ಪುರಸಭೆಯಲ್ಲಿಆಡಳಿತಾಧಿಕಾರಿಗಳಾಗಿದ್ದು, ಈ ಹಿಂದಿನಹಾಗೂಹಾಲಿ ಪಾಂಡವಪುರಉಪಭಾಗಾಧಿಕಾರಿಗಳು, ಕೆಲವು ಅಧಿಕಾರಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರಹಾಗೂ ದಶಕಗಳಿಂದ ಬೇರುಬಿಟ್ಟಿರುವ ಹಂಗಾಮಿ ನೌಕರರುಕಾರಣವಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರಥಮ ಪ್ರಜೆಯ ಮನೆಯ ಮುಂಭಾಗವೇ ಕಸದ ರಾಶಿ: ಸರ್ಕಾರಕೋಟ್ಯಂತರ ರೂ.ಹಣ ವ್ಯಯಿಸಿ ಕಸ ಸಾಗಿಸುವ ದೊಡ್ಡಲಾರಿ, ಟ್ರ್ಯಾಕ್ಟರ್‌ಗಳು,ಮಿನಿಗೂಡ್ಸ್‌ ವಾಹನಗಳು ಸೇರಿದಂತೆ ಅಗತ್ಯ ಪೌರಕಾರ್ಮಿಕರನ್ನು ನೇಮಿಸಿಕೊಟ್ಟಿದೆ.ಆದರೆ ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ಪಟ್ಟಣವನ್ನು ಸ್ವತ್ಛವಾಗಿಟ್ಟುಕೊಳ್ಳಲುಪುರಸಭೆ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಕಸದರಾಶಿಗಳು ಬಿದ್ದಿದ್ದು, ಆ ಕಸವನ್ನು ಬೀದಿ ನಾಯಿಗಳು ಮತ್ತು ಕೋಳಿಗಳು ರಸ್ತೆಯತುಂಬೆಲ್ಲ ಹರಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚರಂಡಿಯಿಂದ ತೆಗೆದ ಕೊಳಕನ್ನುಎರಡು ದಿನಗಳ ಒಳಗಾಗಿ ತೆರವು ಮಾಡದೇ ವಾರಗಟ್ಟಲೇ ರಸ್ತೆಯಲ್ಲಿಯೇ ಬಿಡುತ್ತಿರುವುದು.

ಕೆಲವು ನಾಗರಿಕರು ಅವರ ಮನೆಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನುಮನೆಯಬಾಗಿಲಿಗೆ ಬರುವ ಕಸ ಸಂಗ್ರಹ ವಾಹನಕ್ಕೆ ನೀಡದೆ ರಸ್ತೆ ಬದಿಗೆಎಸೆಯುವುದು ಮತ್ತೂಂದು ಕಾರಣವಾಗಿದೆ. ಪಟ್ಟಣದ ಪ್ರಥಮ ಪ್ರಜೆ ಪುರಸಭಾಅಧ್ಯಕ್ಷರ ಮನೆಯ ಮುಂಭಾಗದಲ್ಲಿಯೇ ಕಸದ ರಾಶಿ ಬಿದ್ದಿರುವುದು ಪುರಸಭಾಆಡಳಿತ ಮಂಡಳಿ ತಲೆ ತಗ್ಗಿಸುವ ವಿಷಯವಾಗಿದೆ.

ಪಟ್ಟಣಕ್ಕೆ ಶಾಪವಾಗಿರುವ ಒಳಚರಂಡಿ: ಪಟ್ಟಣದಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಗುಂಡಿ ನಿರ್ಮಾಣ ಮಾಡಿಕೊಂಡು ಶೌಚಾಲಯದ ನೀರನ್ನು ಅದರಲ್ಲಿಬಿಟ್ಟುಕೊಳ್ಳುತ್ತಿದ್ದರು.

Advertisement

ಆದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಪಟ್ಟಣದಲ್ಲಿಶೌಚಾಲಯದ ನೀರು ಪಟ್ಟಣದಿಂದ ಹೊರಸಾಗಿಸಿ ಪಟ್ಟಣವನ್ನು ಹೈಟೆಕ್‌ ಪಟ್ಟಣವನ್ನಾಗಿ ಮಾಡುತ್ತೇವೆ ಎಂದು ಅಂದಿನ ಸರ್ಕಾರ, ಒಳಚರಂಡಿ ಕಾಮಗಾರಿ ಆರಂಭಮಾಡಿದ್ದರು. ಆದರೆ, ಆ ಕೆಲಸ ಇಂದಿಗೂ ಮುಗಿದಿಲ್ಲ. ಆದರೆ ಸಾರ್ವಜನಿಕರು ಈಗತಮ್ಮ ಮನೆಗಳಲ್ಲಿ ಗುಂಡಿ ತೆಗೆಯುವುದನ್ನು ಬಿಟ್ಟು ಮನೆಯ ಶೌಚಾಲಯದಸಂಪರ್ಕವನ್ನು ಒಳ ಚರಂಡಿಗೆ ನೀಡುತ್ತಿದ್ದಾರೆ.
ಕಾಮಗಾರಿ ಮುಕ್ತಾಯವಾಗದೇ ಇರುವುದರಿಂದ ಶೌಚಾಲಯದ ಕೊಳಕು ನೀರು ಪಟ್ಟಣದ ನಡುರಸ್ತೆಯಲ್ಲಿ ಹರಿಯುವ ಮೂಲಕ ಸಾಂಕ್ರಾಮಿಕ ರೋಗ ಭೀತಿ ಮೂಡಿದೆ.ರಸ್ತೆಗಳು ಗುಂಡಿಮಯ: ಪಟ್ಟಣದ ಕೆಲವು ರಸ್ತೆಗಳಲ್ಲಿ ಸಂಪೂರ್ಣ ಗುಂಡಿಗಳೇತುಂಬಿದ್ದು, ವಾಹನ ಸವಾರರು ಓಡಾಡುವಾಗ ಸಂಚರಿಸಲು ಹರಸಾಹಸ ಪಡಬೇಕಿದೆ.ಪ್ರತಿಯೊಂದು ಧಾರ್ಮಿಕ ಆಚರಣೆಗಳು ನಡೆಯುವ ರಥ ಬೀದಿಯೇ ಗುಂಡಿಗಳಿಂದತುಂಬಿರುವುದು ಶೋಚನೀಯ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next