Advertisement
ಕಾರ್ಖಾನೆ ಆರಂಭವಾಗದಕಾರಣ ಈ ಭಾಗದ ರೈತರುಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಅಲ್ಲದೆ,ಆರ್ಥಿಕ ಚಟುವಟಿಕೆಗಳಮೇಲೂ ಪರಿಣಾಮ ಬೀರಿದೆ. ಸರ್ಕಾರ ಈಗಾಗಲೇ ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವ ಬಗ್ಗೆ ಘೋಷಣೆ ಮಾಡಿದೆ. ಅದರಂತೆಬಜೆಟ್‌ನಲ್ಲಿ ಅನುದಾನ ಘೋಷಿಸುವ ಸಾಧ್ಯತೆ ಇದೆ.
Related Articles
Advertisement
ವೇತನ ಬಾಕಿ: ಪ್ರತಿ ತಿಂಗಳು ಅ ಧಿಕಾರಿಗಳು ಹಾಗೂಸಿಬ್ಬಂದಿಗಳ ವೇತನ 72 ಲಕ್ಷ ರೂ. ಇದೆ. ಆದರೆ ಕಳೆದಹಲವು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಅದರ ಬಾಕಿಯೇ ಲಕ್ಷಾಂತರ ರೂ. ಬಾಕಿ ಉಳಿದಿದೆ.
ಹೊಸ ಮಿಲ್ ಅಳವಡಿಕೆಗೆ 100 ಕೋಟಿ ರೂ. : ಕಾರ್ಖಾನೆಯಲ್ಲಿ ಎರಡು ಮಿಲ್‌ಗಳಿದ್ದು,ಒಂದು ಹೊಸ ಮಿಲ್ ಉತ್ತಮವಾಗಿದೆ.ಪ್ರಸ್ತುತ ಒಂದು ಮಿಲ್ ಕಬ್ಬು ಅರೆಯಲುಉತ್ತಮವಾಗಿದೆ. ಮತ್ತೂಂದು ಹೊಸ ಮಿಲ್‌ಅಳವಡಿಸಲು ಸುಮಾರು 100 ಕೋಟಿ ರೂ.ಅಗತ್ಯವಿದೆ. ಇದರ ಜತೆಗೆ ಮಲಾಸಸ್,ಸ್ಪಿರಿಟ್, ಮಡ್ಡಿ, ಗೊಬ್ಬರ ತಯಾರಿಕೆಗೂ ಒತ್ತು ನೀಡಬೇಕಾಗಿದೆ.
ಕಾರ್ಖಾನೆ ಚಟುವಟಿಕೆ ಆರಂಭಗೊಳ್ಳಲಿ :
ಪ್ರಸ್ತುತ ಜೂನ್‌ನಲ್ಲಿ ಕಬ್ಬು ಅರೆಯಲುಪ್ರಾರಂಭವಾಗಬೇಕಾದರೆ ಈಗಿನಿಂದಲೇ ಎಲ್ಲಚಟುವಟಿಕೆಗಳು ನಡೆಯಬೇಕು. ಸರ್ಕಾರಿಸ್ವಾಮ್ಯದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಿರುವುದರಿಂದ ಬಜೆಟ್ ಎಂದು ಕುಳಿತುಕೊಳ್ಳದೆ, ಆದಷ್ಟು ಬೇಗ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕಾಗಿ257 ಕೋಟಿ ರೂ. ಅಗತ್ಯವಾಗಿದ್ದು,ಕಾರ್ಖಾನೆಯಲ್ಲಿ ಆಗಬೇಕಾಗಿರುವ ಎಲ್ಲಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆಮಾಡುವಂತೆ ಮನವಿ ಮಾಡಲಾಗಿದೆ. ಸಹವಿದ್ಯುತ್ ಘಟಕ, ಬಾಕಿ ಪಾವತಿಗಳು,ವಿದ್ಯುತ್ ಬಿಲ್, ತೆರಿಗೆ ಸೇರಿದಂತೆ ಇತರೆ ಖರ್ಚುಗಳಿಗೆ ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. –ಶಿವಲಿಂಗೇಗೌಡ, ಅಧ್ಯಕ್ಷ, ಮೈಷುಗರ್ ಕಾರ್ಖಾನೆ
ಸರ್ಕಾರ ಕೊಟ್ಟಿರುವ ಮಾತಿನಂತೆಮುಂದಿನ ಜೂನ್‌ನಲ್ಲಿ ಕಬ್ಬು ಅರೆಯಲುಬಜೆಟ್ ಮಂಡಿಸುವವರೆಗೂ ಕಾಯದೆ ಕೂಡಲೇಅನುದಾನ ಬಿಡುಗಡೆ ಮಾಡಿ ಈಗಿನಿಂದಲೇ ಎಲ್ಲರೀತಿಯ ದುರಸ್ತಿ ಕಾರ್ಯ ಗಳುಆರಂಭಗೊಳ್ಳಬೇಕು. ಬಜೆಟ್‌ಗೂ ನಮಗೂಸಂಬಂಧವಿಲ್ಲ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.ಪ್ರಸ್ತುತ ಸಾಲಿನಲ್ಲಿ ಕಾರ್ಖಾನೆ ಆರಂಭವಾಗುವ ಭರವಸೆ ಇದೆ. – ಸುನಂದ ಜಯರಾಂ, ರೈತ ನಾಯಕಿ
– ಎಚ್.ಶಿವರಾಜು