Advertisement

ಮಂಡ್ಯ : ದೇವಿಗೆ ಬಲಿ ಕೊಡಲು ತಂದಿದ್ದ ಕೋಳಿ ಮರ ಏರಿ ಕುಳಿತರೆ…!

06:01 PM May 10, 2022 | Team Udayavani |

ಮಂಡ್ಯ: ಶ್ರೀ ಬಿಸಿಲು ಮಾರಮ್ಮ ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.

Advertisement

ನಗರದ ನೂರಡಿ ರಸ್ತೆಯಲ್ಲಿ ಶ್ರೀ ಕಾಳಮ್ಮ ದೇವಾಲಯದ ಎದುರಿನ ಮರದ ಮೇಲೆ ಕುಳಿತಿದ್ದ ನಾಟಿ ಕೋಳಿಯನ್ನು ನೋಡಿದ ಜನತೆ ಆಶ್ಚರ್ಯ ಚಕಿತರಾದರು.

ಗಾಂಧಿನಗರದಲ್ಲಿ ಶ್ರೀ ಬಿಸಿಲು ಮಾರಮ್ಮ ಉತ್ಸವವನ್ನು ಆಚರಿಸಲಾಗಿತ್ತು. ಭಕ್ತರೊಬ್ಬರು ಎರಡು ಕೋಳಿ ಹುಂಜಗಳನ್ನು ದೇವಿಗೆ ಬಲಿ ನೀಡಲು ದೇವಾಲಯಕ್ಕೆ ತಂದಿದ್ದರು. ಒಂದನ್ನು ಬಲಿ ನೀಡುವಾಗ ಮತ್ತೊಂದು ತಪ್ಪಿಸಿಕೊಂಡು ಮರ ಏರಿತು. ಮೆರವಣಿಗೆಯಲ್ಲಿದ್ದ ಭಕ್ತರು ಆಶ್ಚರ್ಯಚಕಿತರಾಗಿ ಕೋಳಿ ನೋಡಲು ಆಕಾಶದತ್ತ ಮುಖ ಮಾಡಿದರು.

ರೆಂಬೆಯಿಂದ ರೆಂಬೆಗೆ ಹಾರುತ್ತಾ ಅಡ್ಡಾಡುತ್ತಿದ್ದ ಕೋಳಿಯನ್ನು ಇಳಿಸಲು ಕೆಲವರು ಮರ ಏರಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೋಳಿ ತಂದಿದ್ದ ವ್ಯಕ್ತಿಗೆ ಮಾತ್ರ ಮರದ ಕೆಳಗೆ ನಿಂತು ಕೋಳಿ ಯಾವಾಗ ಮರದಿಂದ ಇಳಿಯುತ್ತೆ ಎಂದು ಕಾಯುವ ಸ್ಥಿತಿ. ಮೂರು ತಾಸಿನ ಬಳಿಕ ಮಳೆ ಸುರಿಯಲು ಆರಂಭಿಸಿತು. ಆದರೂ ಕೋಳಿ ಮಾತ್ರ ಮರದಿಂದ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಕೊನೆಗೂ ಕೋಳಿ ಕೈಗೆ ಸಿಗದೆ ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದ್ದಾನೆ.

ಇದನ್ನೂ ಓದಿ : ಕುತುಬ್ ಮಿನಾರ್ ಹೆಸರನ್ನು ವಿಷ್ಣು ಸ್ತಂಭ ಎಂದು ಬದಲಾಯಿಸಿ: ಹಿಂದೂ ಸಂಘಟನೆ ಪ್ರತಿಭಟನೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next