Advertisement

ಕಾವೇರಿ ಹೋರಾಟಗಾರರ ಕೇಸ್‌ ವಾಪಸ್‌: ಸಿಎಂ

01:50 AM Apr 12, 2019 | Team Udayavani |

ಮಂಡ್ಯ: ಸೊಳ್ಳೇಪುರ, ರಾಂಪುರ, ವಳಗೆರೆಹಳ್ಳಿ, ಗೆಜ್ಜಲಗೆರೆ ಸೇರಿದಂತೆ ಮದ್ದೂರು ತಾಲೂಕಿನ ವಿವಿಧೆಡೆ ಸಚಿವ ಡಿ.ಸಿ.ತಮ್ಮಣ್ಣ ಜೊತೆಗೂಡಿ ರೋಡ್‌ ಶೋ ನಡೆಸಿದ
ಕುಮಾರಸ್ವಾಮಿ, ಸುಮಲತಾ ಪರ ಟೀಕಾಪ್ರಹಾರ ನಡೆಸಿದರು.

Advertisement

ತಾಲೂಕಿನ ಗೆಜ್ಜಲಗೆರೆ ಬಂದ ಸಿಎಂ, 1983ರ ಗೆಜ್ಜಲಗೆರೆ ಗೋಲಿಬಾರ್‌ ಪ್ರಕರಣದಲ್ಲಿ ವೀರ ಮರಣವನ್ನಪ್ಪಿದ ನಾಥಪ್ಪ ಹಾಗೂ ಸಿದ್ದಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದರು. ಕಾವೇರಿಗಾಗಿ ಹೋರಾಡಿದ 1,350 ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದರು.

ಜೆಡಿಎಸ್‌ನ್ನು ಮುಗಿಸುವುದರ ಜತೆಗೆ ನಿಖೀಲ್‌ನನ್ನು ಸೋಲಿಸಲು ಎಲ್ಲಾಪಕ್ಷಗಳು ಟೊಂಕಕಟ್ಟಿ ನಿಂತಿದ್ದಾರೆ. ಇಂತಹ ಎಲ್ಲಾ ಪ್ರಯತ್ನಗಳಿಗೆ ತಾವು ತಕ್ಕ ಉತ್ತರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಮಂಡ್ಯದ ಹರಿಪ್ರಿಯ ಹೋಟೆಲ್‌ನ ಚಾಣಕ್ಯ ಸಭಾಂಗಣದಲ್ಲಿ ಗ್ರಾಮೀಣ ವಿದ್ಯುತ್‌ ಪ್ರತಿನಿಧಿಗಳು ಸನ್ಮಾನಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಇಂತಹ ಸಣ್ಣಪುಟ್ಟ ಕಾರ್ಯಕ್ರಮಕ್ಕೆಲ್ಲಾ ಬರೋಕೆ ಆಗೋಲ್ಲ ಎಂದು “ಕೈ’ನಾಯಕರ ವಿರುದ್ಧ ಕಿಡಿಕಾರಿ, ಸನ್ಮಾನ ಸ್ವೀಕರಿಸದೆ ಹೊರ ನಡೆದರು.

ಚುನಾವಣೆಗೆ ಎರಡು ದಿನವಿರುವಾಗ ಪ್ರಚಾರದ ಸಮಯದಲ್ಲಿ ತಮ್ಮ ಬೆಂಬಲಿಗರಿಂದಲೇ ಕಲ್ಲು ತೂರಾಟ ನಡೆಸಿಕೊಂಡು ಆಸ್ಪತ್ರೆ ಸೇರಿಕೊಳ್ಳುವ ಚಿತಾವಣೆಯನ್ನು ಪಕ್ಷೇತರ ಅಭ್ಯರ್ಥಿ ನಡೆಸಿದ್ದಾರೆ. ಆ ಮೂಲಕ ಮತ್ತೂಂದು ರೀತಿಯಲ್ಲಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸುಮಲತಾ ಹೆಸರೇಳದೆ ಆರೋಪಿಸಿದರು.

Advertisement

ಸಿಎಂಗೆ ತರಾಟೆ: ಈ ಮಧ್ಯೆ, ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ರೈತರ ಸಾಲಮನ್ನಾ ವಿಚಾರವಾಗಿ ಮಾತು ಆರಂಭಿಸಿದಾಗ, ಗ್ರಾಮಸ್ಥರು ಅವರ ಭಾಷಣಕ್ಕೆ
ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಸಿಎಂ, ನಿಮಗೆ ಬೇಕಾದವರಿಗೆ ಓಟು ಹಾಕಿಕೊಳ್ಳಿ. ನಿಮ್ಮ ಕಷ್ಟ-ಸುಖಕ್ಕೆ ಯಾರು ಸ್ಪಂದಿಸುತ್ತಾರೋ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿ, ಮುನ್ನಡೆದರು.

ಕಾರಿಗೆ ಬೆಂಕಿ: ಈ ಮಧ್ಯೆ, ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕುಮಾರಸ್ವಾಮಿಯವರ ರೇಂಜ್‌ ರೋವರ್‌ ಕಾರಿನಲ್ಲಿ ತುಂಬಾ ಬಿಸಿಯಾಗಿ, ಹೊಗೆ ಕಾಣಿಸಿಕೊಂಡು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು. ಬಳಿಕ, ಸಚಿವ ಡಿ.ಸಿ.ತಮ್ಮಣ್ಣ ಅವರ ಕಾರಿನಲ್ಲಿ ಪ್ರಚಾರ ಮುಂದುವರಿಸಿದರು. ಗುರುವಾರ ಕಾರನ್ನು ರಿಪೇರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next