Advertisement
ಮಂಡ್ಯ: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರಕ್ಕೆ ನಟ ದರ್ಶನ್ ಕರೆತರುವುದಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ತೆರೆ-ಮರೆಯ ಪ್ರಯತ್ನ ನಡೆಸಿದ್ದಾರೆ. ಬೆಂಬಲಿಗರ ಮೂಲಕ ದರ್ಶನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಪ್ರಚಾರಕ್ಕೆ ಬರುವ ಬಗ್ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
Related Articles
Advertisement
ದರ್ಶನ್ ಪ್ರತಿಕ್ರಿಯೆಗೆ ಬೆಂಬಲಿಗರು ಮೌನ: ದರ್ಶನ್ ನೀಡಿರುವ ಪ್ರತಿಕ್ರಿಯೆಯಿಂದ ಮುಂದಕ್ಕೆ ಮಾತನಾಡಲಾಗದೆ ನಾರಾಯಣಗೌಡರ ಬೆಂಬಲಿ ಗರು ಮೌನ ವಹಿಸಿದರೆನ್ನಲಾಗಿದೆ. ಮತ್ತೆ ಬಂದು ತಮ್ಮನ್ನು ಭೇಟಿಯಾಗುವುದಾಗಿ ಹೇಳಿ ವಾಪಸಾಗಿದ್ದಾರೆ. ಆನಂತರ ನಾರಾಯಣ ಗೌಡರಿಗೆ ಬಲಿಗರು ವಿಷಯ ಮುಟ್ಟಿಸಿದ ರೆನ್ನಲಾಗಿದ್ದು, ಬಳಿಕ ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಮುನಿರತ್ನ ಅವರನ್ನು ನಾರಾಯಣ ಗೌಡರು ದೂರವಾಣಿ ಮುಖೇನ ಸಂಪರ್ಕಿಸಿ ಮಾತನಾಡಿದ್ದಾರೆ. ಬಳಿಕ ಕೆಸಿಎನ್ ಬೆಂಬಲಿಗರು ಮುನಿರತ್ನ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಡೆದ ವಿಚಾರವನ್ನೆಲ್ಲಾ ತಿಳಿಸಿದರೆಂದೂ ಗೊತ್ತಾಗಿದೆ.
ಈ ಸಮಯದಲ್ಲಿ ಚಿತ್ರ ನಿರ್ಮಾಪಕರೂ ಆಗಿರುವ ಮುನಿರತ್ನ ಚುನಾವಣಾ ಪ್ರಚಾರಕ್ಕೆ ದರ್ಶನ್ ಅವರನ್ನು ಕರೆತರುವ ಹೊಣೆ ಹೊತ್ತುಕೊಂಡಿದ್ದಾರೆ. ಅವರನ್ನು ಒಪ್ಪಿಸಿ ಪ್ರಚಾರಕ್ಕೆ ಕರೆತರುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಕ್‌ಲೈನ್ ಮೂಲಕವೂ ಪ್ರಯತ್ನ: ಸಂಸದೆ ಸುಮಲತಾ ಆಪ್ತರಾಗಿರುವ ರಾಕ್‌ಲೈನ್ ವೆಂಕಟೇಶ್ ಸಂಬಂಧದಲ್ಲಿ ಮುನಿರತ್ನ ಅವರಿಗೆ ಬೀಗರೂ ಆಗಿದ್ದಾರೆ. ಅಲ್ಲದೆ, ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ನಿರ್ಮಾಪಕರೂ ಆಗಿರುವ ಮುನಿರತ್ನ ವೈಯಕ್ತಿಕವಾಗಿ ಭೇಟಿ ಮಾಡಿ ದರ್ಶನ್ ಅವರ ಮನವೊಲಿಸುವ ಇಲ್ಲವೇ, ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಮೂಲಕ ದರ್ಶನ್ ಮೇಲೆ ಒತ್ತಡ ತಂದು ನಾರಾಯಣಗೌಡರ ಪರ ಪ್ರಚಾರಕ್ಕೆ ಕರೆತರುವ ಆಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ. ಇದರ ಜೊತೆಗೆ ಮನ್‌ಮುಲ್ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜು ಅವರ ಸಂಬಂಧಿಯೂ ಆಗಿದ್ದಾರೆ. ಅವರ ಮೂಲಕವೂ ದರ್ಶನ್‌ರನ್ನು ಸಂಪರ್ಕಿಸಿ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದೂ ಹೇಳಲಾಗಿದೆ.